More

    ರಾಜ್ಯದಲ್ಲಿ ವಾಡಿಕೆಗೆ ಮೊದಲೇ ಚಳಿ ಶುರು; ಗರಿಷ್ಠ ತಾಪಮಾನದಲ್ಲಿ ಕುಸಿತ..

    ಬೆಂಗಳೂರು: ವಾಡಿಕೆಗಿಂತ ಮೊದಲೇ ರಾಜ್ಯದಲ್ಲಿ ಚಳಿ ಶುರುವಾಗಿದೆ. ಮೋಡ ಕವಿದ ವಾತಾವರಣ ಇರುವುದರಿಂದ ತಣ್ಣನೆ ಗಾಳಿ ಬೀಸುತ್ತಿದ್ದು, ರಾತ್ರಿ ವೇಳೆ ಚಳಿ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಲ್ಲಿ ತಂಪಾದ ವಾತಾವರಣ ಕಂಡುಬರುತ್ತಿದೆ. ರಾತ್ರಿ ಕ್ರಮೇಣ ಚಳಿ ಆವರಿಸಿಕೊಂಡ ಅನುಭವವಾಗುತ್ತಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಸಹಿತ ಆಗಾಗ ಮಳೆ ಬೀಳುತ್ತಿದೆ. ಇದರಿಂದ ಕನಿಷ್ಠ ಹಾಗೂ ಗರಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಬೆಳಗಾವಿ, ವಿಜಯಪುರ, ಬೀದರ್, ಗೋಕರ್ಣ ಸೇರಿ ಇತರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 3 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಇದರಿಂದ ಆ ಜಿಲ್ಲೆಗಳಲ್ಲಿಯೂ ಚಳಿ ಆವರಿಸಿಕೊಂಡಿದೆ. ತಾಪಮಾನ ಹೆಚ್ಚಾಗಿದ್ದರೆ, ಬೀಸುವ ಗಾಳಿ ತಂಪಾಗಿರುವುದಿಲ್ಲ. ವಾರದಿಂದ ಕೆಲ ಜಿಲ್ಲೆಗಳಲ್ಲಿ ಹಗಲಿನಲ್ಲಿ ಬಿಸಿಲು ಕಡಿಮೆ ಇದ್ದರೆ ಸಂಜೆ ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ.

    ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲ ಶುರುವಾಗಿ, ಫೆಬ್ರವರಿವರೆಗೆ ಇರುತ್ತದೆ. ಈ ವೇಳೆ ಉತ್ತರದಿಂದ ದಕ್ಷಿಣ ದಿಕ್ಕಿನತ್ತ ಗಾಳಿ ಬೀಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮ ವಾತಾವರಣದಲ್ಲಿ ತೇವಾಂಶ ಇರುವುದರಿಂದ ವಾಡಿಕೆಗಿಂತ ಮುನ್ನ ಚಳಿ ಶುರುವಾಗಿದೆ. ಜತೆಗೆ, ತಣ್ಣನೆ ಗಾಳಿಯೂ ಬೀಸತೊಡಗಿದೆ. ಮುಂಗಾರು ಮಳೆ ಮುಗಿದು ಈಗಾಗಲೇ ಹಿಂಗಾರು ಶುರುವಾಗಿದೆ. ಅಂದಿನಿಂದ ಈವರೆಗೆ ಮಳೆ ಸುರಿಯುತ್ತಿದೆ.

    ಸಾಧಾರಣ ಮಳೆ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಸೋಮವಾರವೂ ಸಾಧಾರಣ ಮಳೆ ಬಿದ್ದಿದೆ. ಮಂಗಳವಾರದಿಂದ (ನ.15) ಮಳೆ ಕ್ಷೀಣವಾಗಲಿದ್ದು, ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಬೀಳಲಿದೆ. ಭಾರಿ ಪ್ರಮಾಣದಲ್ಲಿ ಮಳೆ ಬೀಳುವುದಿಲ್ಲ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    ರಾಜ್ಯದಲ್ಲಿ ವಾಡಿಕೆಗೆ ಮೊದಲೇ ಚಳಿ ಶುರು; ಗರಿಷ್ಠ ತಾಪಮಾನದಲ್ಲಿ ಕುಸಿತ..

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ಮೂರು ವರ್ಷದ ಮಗುವನ್ನೂ ಬಿಡದ ಕಾಮುಕ ಮುದುಕ; ಅತ್ಯಾಚಾರ ಆರೋಪಿಯ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts