More

    ಶೀತಲ ಸಮರಕ್ಕೆ ವಿಜಯೇಂದ್ರ ಕಿಡಿ

    ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಔರಾದ್ ಶಾಸಕ ಪ್ರಭು ಚವ್ಹಾಣ್ ನಡುವಿನ ಶೀತಲಸಮರ ಮುಂದುವರಿ ದಿದ್ದು, ನಾಯಕರ ವರ್ತನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

    ಗಣೇಶ ಮೈದಾನದಲ್ಲಿ ವಿಜಯೇಂದ್ರ ಅಭಿನಂದನೆ ಮತ್ತು ನೂತನ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲಿಗೆ ಶಾಸಕ ಚವ್ಹಾಣ್ ಮಾತನಾಡಿ, ಕಾರ್ಯ ಕರ್ತರಿಗೆ ಅನ್ಯಾಯ, ಧೋಖಾ ಆಗಬಾರದು. ನಮ್ಮ ಕಾರ್ಯಕರ್ತರು ತನು, ಮನ, ಧನದಿಂದ ಕೆಲಸ ಮಾಡá-ತ್ತಾರೆ. ಆದರೆ ಅವರ ವಿರುದ್ಧ ಕೇಸ್ ಮಾಡಬೇಕೆ ಎಂದು ಪ್ರಶ್ನಿಸಿದರು. ಮುಂಬರುವ ಲೋಕಸಭೆ ಚುನಾವಣೆ ಎದುರಿಸಿ ಗೆಲ್ಲೋಣ. ಆದರೆ ನಮಗೆ ಉತ್ತಮ ಅಭ್ಯರ್ಥಿ ಕೊಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಖೂಬಾರನ್ನು ಬದಲಾಯಿಸಬೇಕು ಎಂದರು.

    ನಂತರ ಮಾತನಾಡಿದ ಖೂಬಾ, ಹತ್ತು ವರ್ಷದಿಂದ ಪ್ರಾಮಾಣಿಕ, ಭ್ರಷ್ಟಾಚಾರ ಮತ್ತು ಕಳಂಕರಹಿತ ಕೆಲಸ ಮಾಡುತ್ತಿರುವೆ. ಒಂದು ದಿನವೂ ಕ್ಷೇತ್ರದ ಸಂಪರ್ಕ ಮುರಿದುಕೊಂಡಿಲ್ಲ. ಸೋಮಾರಿಯಾಗಿ ದೆಹಲಿಯಲ್ಲಿ ಕುಳಿತಿಲ್ಲ. ಯಾವ ಗೊಂದಲಗಳಿಗೂ ವಿಜಯೇಂದ್ರ ಅವಕಾಶ ಕೊಡಲ್ಲ ಎಂಬ ನಂಬಿಕೆ ಇದೆ. ಇದು ರಾಜ್ಯಾಧ್ಯಕ್ಷರ ಜವಾಬ್ದಾರಿಯೂ ಆಗಿದ್ದು, ಎಲ್ಲವೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಯಾರೇನೇ ಹೇಳಿದರು ಸತ್ಯ ಅರಿಯುತ್ತಾರೆ. ಸಮಯ ಬಂದಾಗ ವರಿಷ್ಠರು ಇಂಜೆಕ್ಷನ್ ಕೊಡುವ ವಿಶ್ವಾಸವಿದೆ ಎಂದು ಪರೋಕ್ಷವಾಗಿ ಚವ್ಹಾಣ್ ವಿರುದ್ಧ ಹರಿಹಾಯ್ದರು.

    ನಂತರ ಮಾತನಾಡಿದ ವಿಜಯೇಂದ್ರ ಇಬ್ಬರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ವೇದಿಕೆಯಲ್ಲಿ ಕುಳಿತ ಮುಖಂಡರಿಗೆ ಕಾರ್ಯಕರ್ತರ ಶ್ರಮ ಗೊತ್ತಿಲ್ಲ ಎನ್ನುವಂಥ ಪರಿಸ್ಥಿತಿ ಬಂದಿದೆ. ಹಲವು ದಶಕದಿಂದ ಜಿಲ್ಲೆಯಲ್ಲಿ ಬೆವರು ಸುರಿಸಿ ಪಕ್ಷ ಕಟ್ಟಿದ್ದಾರೆ ಎಂಬುದನ್ನು ಮುಖಂಡರು ಮರೆತಿದ್ದಾರೆ ಎಂದು ಖೂಬಾ, ಚವ್ಹಾಣ್​ಗೆ ಟಾಂಗ್ ನೀಡಿದರು.

    ನಾನು ಚುನಾಯಿತ ಪ್ರತಿನಿಧಿ ಆದ ಬಳಿಕ ಬಿಜೆಪಿ ಜನಿಸಿದೆ ಎನ್ನುವಂತೆ ಇಲ್ಲಿನ ಮುಖಂಡರು ವರ್ತಸುತ್ತಿದ್ದರಿಂದ ಇಂಥ ಸಮಸ್ಯೆ ಉದ್ಭವಿಸಿದೆ. ದಿ.ರಾಮಚಂದ್ರ ವೀರಪ್ಪ ಅವರಿಗೆ ನಾನು ಇಂದಿಗೂ ಸ್ಮರಿಸುತ್ತೇನೆ. ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರು. ಅದನ್ನು ಮುಖಂಡರು ಮರೆತಿದ್ದಾರೆ.

    ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಖಡಕ್ ವಾರ್ನ್ ಮಾಡಿದರು.

    ಇಡೀ ಜಗತ್ತು ಮೆಚ್ಚುವಂಥ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾಂಗ್ರೆಸ್​ನಿಂದ ಸಾಕಷ್ಟು ಅವಮಾನ ಅನುಭವಿಸಿದ್ದಾರೆ. ದಲಿತ ಹಾಗೂ ಬಾಬಾಸಾಹೇಬರ ವಿರೋಧಿ ಪಕ್ಷ ಕಾಂಗ್ರೆಸ್. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸೋಣ.

    | ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts