More

    ಕಾಫಿನಾಡಲ್ಲಿ ಗ್ರಾಪಂಗೆ ಶೇ.81ಮತದಾನ

    ಚಿಕ್ಕಮಗಳೂರು: ಜಿಲ್ಲೆಯ 194 ಗ್ರಾಪಂನ 1893 ಸ್ಥಾನಗಳಿಗೆ ಮಂಗಳವಾರ ಮತದಾನ ನಡೆದಿದ್ದು 5290 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

    ಕರೊನಾ ಹಿನ್ನೆಲೆಯಲ್ಲಿ ಸಕಲ ಸುರಕ್ಷತಾ ಕ್ರಮದ ಜತೆಗೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆವರೆಗೆ ಸುಗಮವಾಗಿ ನಡೆಯಿತು. ಮಧ್ಯಾಹ್ನದವರೆಗೆ ಶೃಂಗೇರಿ ತಾಲೂಕಿನಲ್ಲಿ ಮಧ್ಯಾಹ್ನ ಒಂದು ಗಂಟೆವರೆಗೆ ಅತ್ಯಧಿಕ ಪ್ರಮಾಣದ ಅಂದರೆ ಶೇ.50.42ರಷ್ಟು ಮತ ಚಲಾವಣೆಯಾಗಿದೆ.

    ಇದೇ ವೇಳೆಗೆ ಚಿಕ್ಕಮಗಳೂರಿನಲ್ಲಿ ಶೇ.47.72, ಕಡೂರು ತಾಲೂಕಿನಲ್ಲಿ ಶೇ.45.55, ಕೊಪ್ಪದಲ್ಲಿ ಶೇ.45.48, ಎನ್​ಆರ್ ಪುರದಲ್ಲಿ ಶೇ.43.89, ತರೀಕೆರೆಯಲ್ಲಿ ಶೇ.41.11, ಅಜ್ಜಂಪುರದಲ್ಲಿ ಶೇ.41.06 ಹಾಗೂ ಮೂಡಿಗೆರೆಯಲ್ಲಿ ಶೇ.38.03 ಮತದಾನವಾಗಿತ್ತು.

    ಗ್ರಾಪಂ ಚುನಾವಣೆಯಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಸಂಚಲನ ಕಂಡು ಬಂದಿದ್ದು, ಅಭ್ಯರ್ಥಿಗಳು ಸ್ಥಳೀಯರೇ ಆಗಿರುವ ಕಾರಣಕ್ಕೆ ಮತದಾರರೂ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.

    ಮತದಾನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಸಲುವಾಗಿ ಕಾರ್ವಿುಕರಿಗೆ ರಜೆ ನೀಡಬೇಕೆನ್ನುವುದು ನಿಯಮವಾಗಿದ್ದರೂ ಕೆಲಸಕ್ಕೆ ತೆರಳುವ ತರಾತುರಿಯಲ್ಲಿದ್ದ ಬಹುತೇಕ ಕಾರ್ವಿುಕರು ಮುಂಜಾನೆಯೇ ಮತ ಚಲಾಯಿಸಿ ನಿರ್ಗಮಿಸಿದರು. ಅಂತೆಯೇ ಸಂಜೆ ಕೆಲಸ ಮುಗಿಸಿ ಮತದಾನಕ್ಕೆ ಆಗಮಿಸಿದ ಕಾರ್ವಿುಕರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ಹೊತ್ತಲ್ಲಿ ಸಾಕಷ್ಟು ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts