More

    ಒಂದೇ ಇಲಾಖೆ ವ್ಯಾಪ್ತಿಗೆ ಕಾಫಿ ಬೆಳೆಗಾರರು, ರೈತರು

    ಆಲ್ದೂರು: ಯುವಕರೇ ಮುಂದಿನ 100 ದಿನ ನನಗೆ ಕೊಡಿ. ನಾನು ಈ ದೇಶವನ್ನು ಜಗತ್ತಿನ ಮಧ್ಯದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದ್ದು. ಯುವ ಸಮೂಹ ದೇಶದಲ್ಲಾಗಿರುವ ಕೆಲಸಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
    ಕೂದುವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ನಮೋ ಯುವ ಚೌಪಾಲ್ 400 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಲ್ದೂರಲ್ಲಿ ಮೊದಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಯುವಕರಿಗೆ ಕೇಂದ್ರ ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕಾಫಿ ಬೆಳೆಗಾರರಿಗೆ, ರೈತರಿಗೆ ಅನುಕೂಲವಾಗ ಬೇಕಾದರೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ವ್ಯಾಪ್ತಿಯೊಳಗೆ ಬರಬೇಕು ಇದರಲ್ಲಿ ಯಾವುದು ಅನುಕೂಲವಾಗುತ್ತದೆ ಎಂಬುದನ್ನು ಕಾಫಿ ಮಂಡಳಿ ಅಧ್ಯಕ್ಷರ ಜತೆ ಚರ್ಚೆ ನಡೆಸಿದ್ದು, ಈ ಬಗ್ಗೆ ರೈತರು ಹಾಗೂ ಬೆಳೆಗಾರರಿಂದ ಅಭಿಪ್ರಾಯ ಪಡೆಯಲಾಗುವುದು ಎಂದರು.
    ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ತೋಟದ ಮಾಲೀಕರು ಹಾಗೂ ಕಾರ್ಮಿಕರಿಗೆ ವಿಮಾ ಯೋಜನೆ ಮಾಡಬೇಕು. ಕೆಲಸದ ಸಂದರ್ಭದಲ್ಲಿ ಅವಘಡಗಳಾದಾಗ ವಿಮೆ ದೊರೆಯುವಂತಾಗಬೇಕು ಈ ಯೋಜನೆಯನ್ನು ಕಾಫಿ ಮಂಡಳಿ ಮೂಲಕ ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ ಕಾಫಿ ಬೆಳೆಗಾರರು ಹಾಗೂ ರೈತರು ಒಂದು ಇಲಾಖೆಯ ವ್ಯಾಪ್ತಿಯಲ್ಲಿ ಬರಬೇಕಿದೆ ಎಂದರು.
    ಸರ್ಫೇಸಿ ಕಾಯ್ದೆ ಬೆಳೆಗಾರರಿಗೆ ಮಾರಕವಾಗಿದ್ದು, ಕಾಫಿ ಬೆಳೆಗಾರರು ಹವಮಾನ ವೈಪರೀತ್ಯ ಈ ರೀತಿಯ ಹಲವು ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಬ್ಯಾಂಕ್‌ನವರು ಬೆಳೆಗಾರರ ಜತೆ ಹೊಂದಾಣಿಕೆ ಮಾಡಿಕೊಂಡು ಸಾಲ ಮರುಪಾವತಿಗೆ ಕಾಲವಕಾಶ ನೀಡಬೇಕು. ತೋಟಗಳನ್ನು ವಶಕ್ಕೆ ಪಡೆಯುವುದರಿಂದ ಸಾಲ ಮರುಪಾವತಿ ಸಾಧ್ಯವಿಲ್ಲ. ತೋಟಗಳು ಪಾಳು ಬೀಳುತ್ತವೆ ಆದರ ಬದಲು ಬೆಳೆಗಾರರಿಗೆ ಕಾಲವಕಾಶ ನೀಡ ಬೇಕು ಎಂಬ ನಿರ್ದೇಶನವನ್ನು ಬ್ಯಾಂಕ್‌ಗಳಿಗೆ ನೀಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts