More

    ಅಕಾಲಿಕ ಮಳೆಗೆ ಉದುರಿದ ಕಾಫಿ ಹಣ್ಣು

    ಶೃಂಗೇರಿ: ಅಕಾಲಿಕ ಮಳೆಗೆ ಮಲೆನಾಡಿನ ರೈತರು ಹೈರಾಣಾಗಿದ್ದಾರೆ. ಬುಧವಾರ ರಾತ್ರಿ ಸುರಿದ ಮಳೆಗೆ ಅಡಕೆ, ಕಾಫಿ, ಭತ್ತ ಸಂಸ್ಕೃರಣೆಗೆ ತೊಂದರೆಯಾಗಿದೆ. ಜೂನ್‌ಗೆ ಬರಬೇಕಾದ ಮಳೆ ಜನವರಿಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಅಕಾಲಿಕ ಮಳೆಗೆ ವಿವಿಧ ರೋಗಗಳಿಂದ ಬೆಳೆಗಳನ್ನು ಕಳೆದುಕೊಂಡಿರುವ ರೈತರು ಪರ್ಯಾಯವಾಗಿ ಕಾಫಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.
    ಪ್ರಸ್ತುತ ಗಿಡದ ತುಂಬಾ ಕಾಫಿ ಬೆಳೆ ಹಣ್ಣಾಗಿ ನಿಂತಿದೆ. ಮತ್ತೊಂದೆಡೆ ಗಿಡದಲ್ಲಿ ಹೂವು ಅರಳುತ್ತಿದೆ. ಅಕಾಲಿಕ ಮಳೆಯಿಂದ ಬುಧವಾರ ಸಾಕಷ್ಟು ಕಡೆ ಕಾಫಿಹಣ್ಣು ಉದುರಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹವಾಮಾನ ವೈಪರೀತ್ಯದಿಂದ ಕಾಡುವ ಮಳೆಯಿಂದ ರೈತರು ಸಂಕಷ್ಟದ ನಡುವೆ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts