More

    ನೀತಿ ಸಂಹಿತೆ; ಮುಸುಕು ರಾಜಕೀಯ

    ಬೆಂಗಳೂರು: ಚುನಾವಣೆ ನೀತಿ ಸಂಹಿತ ಜಾರಿ ವೇಳೆ ಒಂದಷ್ಟು ರಾಜಕೀಯ ಮೇಲಾಟ ನಡೆಯುವುದು ಸಾಮಾನ್ಯ. ಪಕ್ಷಗಳಿಗೆ ತಮಗೆ ಮಾತ್ರ ನಿಯಮ ಅನ್ವಯ, ಎದುರಾಳಿಗೆ ಅನ್ವಯ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕುವುದು ಸಾಮಾನ್ಯ.
    ನೀತಿ ಸಂಹಿತೆ ಜಾರಿಗೆ ಬಂದ ಕೂಡಲೇ ಜನಪ್ರತಿನಿಧಿಗಳ ೆಟೋ, ಹೆಸರಿನ ಮೇಲೆ ಪಟ್ಟಿ ಅಂಟಿಸಿ ಜನರಿಗೆ ಕಾಣದಂತೆ ಮಾಡುವ ಕಾರ್ಯ ಚುನಾವಣೆ ಆಯೋಗದ ಕಡೆಯಿಂದ ನಡೆಯುತ್ತದೆ. ಈ ಕಾರ್ಯಾಚರಣೆ ವೇಳೆ ರಾಜಾಜಿ ನಗರದ ವಾಜಪೇಯಿ ಒಳಾಂಗಣ ಸ್ಟೇಡಿಯಂನ ಆವರಣದಲ್ಲಿನ ಮಾಜಿ ಪ್ರಧಾನಿ ವಾಜಪೇಯಿಯವರ ಪ್ರತಿಮೆಗೆ ಅಧಿಕಾರಿಗಳು ಮುಸುಕು ಹಾಕಿಬಿಟ್ಟರು. ಆದರೆ, ಮಂತ್ರಿಮಾಲ್ ಬಳಿ ಸರ್ಕಲ್ನಲ್ಲಿ ನಿಲ್ಲಿಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪ್ರತಿಮೆ ಯನ್ನು ಹಾಗೇ ಬಿಟ್ಟುಬಿಟ್ಟರು. ಇದನ್ನು ಗಮನಿಸಿದ ಬಿಜೆಪಿ ನಾಯಕರು ಅಧಿಕಾರಿಗಳ ಗಮನಕ್ಕೆ ತಂದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೊನೆಗೆ ಶಾಸಕ ಸುರೇಶ್ ಕುಮಾರ್ ದನಿ ಎತ್ತಿ ನೀತಿ ಸಂಹಿತೆಯ ಜಾರಿಯಲ್ಲಿಯೂ ಪಕ್ಷಪಾತವೇ ಎಂದು ಗಟ್ಟಿಯಾಗಿ ಪ್ರಶ್ನೆಮಾಡಿದರು. ಚುನಾವಣಾ ನೀತಿ ಸಂಹಿತೆ ಜಾರಿ ತರಬೇಕಾಗಿರುವ, ಚುನಾವಣಾ ಆಯೋಗದ ಅಧಿಕಾರಿಗಳಾಗಿರುವ ಬಿಬಿಎಂಪಿ ಅಧಿಕಾರಿಗಳು ರಾಜ್ಯ ಸರ್ಕಾರದ ಕೈಗೊಂಬೆಗಳಾಗಿರುವುದು ಸ್ಪಷ್ಟ. ಇದಕ್ಕೆ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಪಟ್ಟುಹಿಡಿದರು.
    ಜತೆಗೆ ಭಾರತ ರತ್ನ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಯವರ ಪ್ರತಿಮೆಗೆ ಚುನಾವಣಾ ಆಯೋಗದ ನೀತಿ ಸಂಹಿತೆ ಕ್ರಮ. ಇದೇ ನೀತಿ ಸಂಹಿತೆ ಕ್ರಮ ಓಕಳಿಪುರದ ರಾಜೀವ್ ಗಾಂಧಿ ಸಿಗ್ನಲ್ ಫ್ರೀ ಅಷ್ಟಪಥ ಕಾರಿಡಾರ್ ನಾಮಫಲಕಕ್ಕೆ ಏಕೆ ಇಲ್ಲ? ಎಂದು ಚುನಾವಣಾ ಆಯೋಗಕ್ಕೆ ಪ್ರಶ್ನೆ ಹಾಕಿದರು.
    ನಗರದ ನೂರಾರು ಸ್ಥಳಗಳಲ್ಲಿರುವ ಕಾಂಗ್ರೆಸ್ ನಾಯಕರ ಹೆಸರು, ಪ್ರತಿಮೆ, ೆಟೋಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಇಕ್ಕಟ್ಟಿಗೆ ಸಿಲುಕಿಸಬಹುದೆಂದು ಎಚ್ಚೆತ್ತು ಓಡೋಡಿ ಹೋಗಿ ವಾಜಪೇಯಿ ಪ್ರತಿಮೆಗೆ ಹಾಕಿದ್ದ ಮುಸುಕನ್ನು ಅಧಿಕಾರಿಗಳು ತೆಗೆದರು. ಅಷ್ಟರಲ್ಲಾಗಲೇ ಬಿಜೆಪಿಯು ಚುನಾವಣೆ ಆಯೋಗಕ್ಕೆ ದೂರಿತ್ತು, ನೀತಿ ಸಂಹಿತೆ ಜಾರಿ ನೆಪದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆಕ್ಷೇಪಣೆ ದಾಖಲಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts