More

    ತರಬೇತಿ ಹೆಸರಲ್ಲಿ ತೆಂಗು ನಾರು ಮಂಡಳಿ ಕಾರ್ಖಾನೆ

    ರವೀಂದ್ರ ಕೋಟ
    ಉಡುಪಿ ಜಿಲ್ಲೆಯ ಪಾಂಡೇಶ್ವರ ಗ್ರಾಮ ಪಂಚಾಯಿತಿ ಪಕ್ಕದ ಸರ್ಕಾರಿ ಜಾಗದ ಸರ್ಕಾರಿ ಕಾಂಪ್ಲೆಕ್ಸ್‌ನಲ್ಲಿ ಮಹಿಳಾ ಮಂಡಲದ ಮೀಸಲಿರಿಸಿದ ಕಟ್ಟಡದಲ್ಲಿ ತರಬೇತಿ ಹೆಸರಿನಲ್ಲಿ ಘಟಕ ಸ್ಥಾಪಿಸಿರುವ ತೆಂಗಿನ ನಾರು ಅಭಿವೃದ್ಧಿ ಮಂಡಳಿ ಪ್ರಸ್ತುತ ಕಾರ್ಖಾನೆಯನ್ನಷ್ಟೇ ನಡೆಸುತ್ತಿದೆ. ಸ್ಥಳೀಯರಿಗೆ ಅನುಕೂಲವಾಗುವಂಥ ಯಾವುದೇ ತರಬೇತಿ ಕಾರ್ಯಕ್ರಮ ಇಲ್ಲಿ ನಡೆಯುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
    1964ರಲ್ಲಿ ಸಾಸ್ತಾನ ಪಾಂಡೇಶ್ವರ ಮಹಿಳಾ ಮಂಡಲಕ್ಕೆ ಮೀಸಲಿರಿಸಿದ ಕಟ್ಟಡದಲ್ಲಿ ಮಹಿಳಾ ಮಂಡಲದ ಸದಸ್ಯರ ಸ್ವ ಉದ್ಯೋಗಕ್ಕಾಗಿ ತೆಂಗಿನ ನಾರಿನ ನಿಗಮದ ಮೂಲಕ ತರಬೇತಿ ನೀಡುತ್ತಿದ್ದ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಿದೆ. ಆದರೆ ಘಟಕದಿಂದ ಹೊರಬರುವ ಕೆಮಿಕಲ್‌ಯುಕ್ತ ನೀರು ಸ್ಥಳೀಯ ರಸ್ತೆಯನ್ನೂ ಆವರಿಸಿದೆ. ಧೂಳಿನ ಸಮಸ್ಯೆಯೂ ಇದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಎಚ್ಚರಿಕೆ ನೀಡಿದರೂ ಕಂಪನಿ ಕ್ರಮ ಕೈಗೊಂಡಿಲ್ಲ.

    ಮಹಿಳಾ ಮಂಡಲವಿದ್ದ ಕಟ್ಟಡ: ಮಹಿಳಾ ಮಂಡಲ ಕಾರ್ಯಾಚರಿಸುತ್ತಿರುವ ಈ ಕಟ್ಟಡವನ್ನು ಇನ್ನಾವುದೊ ಸಂಸ್ಥೆ ಮುಟ್ಟುಗೋಲು ಹಾಕಿಕೊಳ್ಳುವುದು ಎಷ್ಟು ಸಮಂಜಸ? ಸ್ವ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಇಲ್ಲಿಗೆ ಕಾಲಿರಿಸಿದ ಈ ಸಂಸ್ಥೆ ಇದೊಂದು ತನ್ನದೇ ಆಸ್ತಿ ಎಂಬಂತೆ ತನಗೆ ಬೇಕಾದ ಹಾಗೆ ನಡೆದುಕೊಳ್ಳುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರಬೇತಿಗೆ ಎಂದು ಬಂದ ನಾರು ಅಭಿವೃದ್ಧಿ ಮಂಡಳಿ ಹುರಿ ಹಗ್ಗ ಕಾರ್ಖಾನೆ ರೀತಿ ಕಾರ್ಯಾಚರಿಸುತ್ತಿದೆ. ಹಾಗಾದರೆ ತರಬೇತಿ ನೀಡಲು ಬಂದವರು ಅಲ್ಲೇ ಠಿಕಾಣಿ ಹೂಡಿದ್ದು ಎಷ್ಟು ಸಮಂಜಸ?ಈ ಬಗ್ಗೆ ಶೀಘ್ರಗತಿ ಅಲ್ಲಿಂದ ತೆರೆವುಗೊಳಿಸಬೇಕೆಂಬುವುದು ಅಲ್ಲಿನ ಜನರ ಆಗ್ರಹ.

    1964ರಲ್ಲಿ ನಮ್ಮ ಮಹಿಳಾ ಮಂಡಲ ವಶದಲ್ಲಿದ್ದ ಕಟ್ಟಡದಲ್ಲಿ ಸ್ವ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ತೆಂಗಿನ ನಾರು ಅಭಿವೃದ್ಧಿ ಸಂಸ್ಥೆಯವರು ಇಲ್ಲಿಗೆ ಕಾಲಿರಿಸಿದರು. ಆದರೆ ಕಾಲ ಕಳೆದಂತೆ ನಮ್ಮ ಕಟ್ಟಡದಲ್ಲಿ ಅವರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಎಷ್ಟು ಸರಿ? ಪಂಚಾಯಿತಿ ಮೂಲಕವೇ ಅದನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದೇವೆ.
    ಸುಮಿತ್ರಾ ಸುಧಾಕರ್
    ಅಧ್ಯಕ್ಷರು ಸಾಸ್ತಾನ ಪಾಂಡೇಶ್ವರ ಮಹಿಳಾ ಮಂಡಲ
    ಈಗಿನ ಕಟ್ಟಡ ಸಾಸ್ತಾನ ಮಹಿಳಾ ಮಂಡಳಕ್ಕೊಳಪಟ್ಟಿದೆ. ಆದರೆ ಅವರ ಕಟ್ಟಡವನ್ನು ಒಂದು ನಿಗಮದವರು ವಶಪಡಿಸಿಕೊಂಡು ಕಾರ್ಯನಿರ್ವಹಿಸುವುದು ಎಷ್ಟು ಸಮಂಜಸ? ಆದ್ದರಿಂದ ಪಂಚಾಯಿತಿ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ, ನಿಗಮಕ್ಕೆ ಕಳುಹಿಸಿದ್ದೇವೆ. ಶೀಘ್ರವೇ ಮಹಿಳಾ ಮಂಡಲಕ್ಕೆ ಹಿಂತಿರುಗಿಸಿ ಎಂಬ ಆಶಯ ನಮ್ಮದು.
    ಗೋವಿಂದ ಪೂಜಾರಿ
    ಅಧ್ಯಕ್ಷರು ಪಾಂಡೇಶ್ವರ ಗ್ರಾಮ ಪಂಚಾಯಿತಿ

    ಹಿಂದೆ ಯಾವ ರೀತಿ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ನಮ್ಮ ಇಲಾಖೆಗೆ ಮನವಿ ನೀಡಲಿ. ಅದರಂತೆ ನಮ್ಮ ಮೇಲಧಿಕಾರಿಗಳಿಗೆ ಕಳುಹಿಸುತ್ತೇವೆ. ಅಲ್ಲಿನ ಸಂದೇಶದಂತೆ ನಾವು ನಡೆದುಕೊಳ್ಳುತ್ತೇವೆ. ಇದುವರೆಗೆ ಯಾರೂ ನಮ್ಮ ಬಳಿ ಬಂದಿಲ್ಲ, ಯಾವುದೇ ಬಾಯಿ ಮಾತಲ್ಲಿ ಅಲ್ಲಿಂದ ತೆರವುಗೊಳಿಸಲು ಸಾಧ್ಯವಿಲ್ಲ.
    ರಾಮದಾಸ್,
    ರೀಜನಲ್ ಮ್ಯಾನೇಜರ್ ದಕ್ಷಿಣ ಕನ್ನಡ, ಉತ್ತರಕನ್ನಡ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts