More

    ಕೊಬ್ಬರಿ ಹೋರಿ ಓಡಿಸುವ ಕ್ರೀಡೆ ಮಾ. 15ರಂದು

    ಹಾನಗಲ್ಲ: ರೈತ ಸಮುದಾಯದ ಜನಪದ ಕ್ರೀಡೆಯಾಗಿರುವ ಕೊಬ್ಬರಿ ಹೋರಿ ಓಡಿಸುವ ಕ್ರೀಡೆಯನ್ನು ಮಾ. 15ರಂದು ಪಟ್ಟಣದ ಹಳೇಕೋಟಿ ಬಯಲಿನಲ್ಲಿ ಆಯೋಜಿಸಲಾಗಿದೆ ಎಂದು ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಮೋಹನಕುಮಾರ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಪಟ್ಟಣದ ರಾಮಲಿಂಗೇಶ್ವರ ಯುವಕ ಮಂಡಳ, ಜನಹಿತ ರಕ್ಷಣಾ ವೇದಿಕೆ ಹಾಗೂ ಜನಪದ ಹೆಜ್ಜೆ, ರಾಷ್ಟ್ರೀಯ ಜಾನಪದ ಆಟಗಳು ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಕೊಬ್ಬರಿ ಹೋರಿ ಓಡಿಸುವ ಕ್ರೀಡೆ ಆಯೋಜಿಸಲಾಗಿದೆ. ಎಲ್ಲ ಸುರಕ್ಷಿತ ಕ್ರಮ ಕೈಗೊಂಡು ಯಾವುದೇ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಆಯೋಜಕರನ್ನು ಪೋ›ತ್ಸಾಹಿಸುವ ನಿಟ್ಟಿನಲ್ಲಿ ಮೊದಲ ಬಂಪರ್ ಬಹುಮಾನವಾಗಿ ಬೈಕ್ ಅನ್ನು ಸಂಸ್ಥೆಯಿಂದ ನೀಡಲಾಗುವುದು ಎಂದರು.

    ವೇದಿಕೆ ವತಿಯಿಂದ ರಾಜ್ಯ ಮಟ್ಟದ ಕಬಡ್ಡಿ, ವ್ಹಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದೇವೆ. ಮಾ. 12, 13 ಹಾಗೂ 14ರಂದು ಕ್ರಿಕೆಟ್ ಟೂರ್ನಾಮೆಂಟ್ ಫೈನಲ್ ಪಂದ್ಯ ನಡೆಯಲಿವೆ. ಕಂದಾಯ, ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಮಾಧ್ಯಮ, ವಕೀಲರ ಸಂಘದವರಿಗೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗುವುದು ಎಂದರು.

    ಸ್ವ ಉದ್ಯೋಗ ಕೇಂದ್ರ: ತಾಲೂಕಿನಲ್ಲಿ ಜನಹಿತ ರಕ್ಷಣಾ ವೇದಿಕೆಯಿಂದ ಮಹಿಳಾ ಸ್ವ ಉದ್ಯೋಗ ಕೇಂದ್ರವನ್ನು ಹಾನಗಲ್ಲ ಹಾಗೂ ಅಕ್ಕಿಆಲೂರಲ್ಲಿ ಆರಂಭಿಸಲಾಗುತ್ತಿದೆ. ಆಸಕ್ತ ಮಹಿಳೆಯರಿಗೆ ಹೊಲಿಗೆ ಹಾಗೂ ಎಂಬ್ರಾಯಿಡರಿ ತರಬೇತಿ ನೀಡಲಾಗುತ್ತದೆ. ಈಗಾಗಲೇ 83 ಹೊಲಿಗೆ ಯಂತ್ರಗಳು ಬಂದಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ವೇದಿಕೆ ಸಂಚಾಲಕ ಸುಭಾಸ ಗಡ್ಡದವರ ತಿಳಿಸಿದರು.

    ಹೋರಿ ಹಬ್ಬದ ಸಂಘಟಕ ಗಣೇಶ ಮೂಡ್ಲಿ ಮಾತನಾಡಿ, ಹೋರಿ ಸ್ಪರ್ಧೆಗೆ ಹಲವು ರಾಜ್ಯಗಳಿಂದ ಹೋರಿಗಳು ಆಗಮಿಸಲಿವೆ. ಹೋರಿ ಹಬ್ಬದಲ್ಲಿ ಪಾಲ್ಗೊಳ್ಳುವ ಜಾನುವಾರು ಹಾಗೂ ನೋಡುಗರಿಗೆ 4 ಲಕ್ಷ ರೂ. ಜನರಲ್ ವಿಮೆ ಮಾಡಲಾಗುತ್ತದೆ. ಇದು ಒಂದು ವರ್ಷದವರೆಗೂ ಚಾಲ್ತಿಯಲ್ಲಿರುತ್ತದೆ ಎಂದರು.

    ಮೊದಲ ಬಂಪರ್ ಬಹುಮಾನ ಪಲ್ಸರ್ ಬೈಕ್, ನಾಲ್ಕು ಹೋರಿಗಳಿಗೆ ದ್ವಿತೀಯ ಬಹುಮಾನವಾಗಿ ತಲಾ ಒಂದೊಂದು ಬೈಕ್, ತೃತೀಯ ಬಹುಮಾನವಾಗಿ 4 ಹೋರಿಗಳಿಗೆ ತಲಾ 10 ಗ್ರಾಂ ಬಂಗಾರ ನೀಡಲಾಗುವುದು ಎಂದರು.

    ಹೋರಿ ಹಬ್ಬದ ಸಂಚಾಲಕ ನಾಗೇಂದ್ರ ತುಮರಿಕೊಪ್ಪ ಉಪಸ್ಥಿತರಿದ್ದರು.

    ಫೋಟೋ 22 ಎಚ್​ಎನ್​ಎಲ್ 1

    ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಮೋಹನಕುಮಾರ ಮಾತನಾಡಿದರು. ಗಣೇಶ ಮೂಡ್ಲಿ, ಸುಭಾಸ ಗಡ್ಡದವರ, ನಾಗೇಂದ್ರ ತುಮರಿಕೊಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts