More

    ಸಂಕಷ್ಟದಲ್ಲಿದ್ದರೂ ನರೇಗಾ ಕಾರ್ಮಿಕರು ದೇಣಿಗೆ ಕೊಟ್ರು, ಏಕೆ?

    ಶಿವಮೊಗ್ಗ: ಮಹಾಮಾರಿ ಕೋವಿಡ್-19 ಮಣಿಸುವ ಹೋರಾಟದ ಹಂತವಾಗಿ ಘೋಷಣೆಯಾದ ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಿನಗೂಲಿಕಾರರೇ ಕರೊನಾ ನಿರ್ವಹಣೆ ಕಾರ್ಯಕೆಂದು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ!

    ಹೌದು, ಇಂತಹದ್ದೊಂದು ಮಾನವೀಯತೆಗೆ ಸಾಕ್ಷಿಯಾಗಿದ್ದು ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಗ್ರಾಪಂ ವ್ಯಾಪ್ತಿಯ ಮಡಿಕೆ ಚೀಲೂರಿನಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ನರೇಗಾ ಕಾರ್ಮಿಕರು. ನರೇಗಾದಡಿ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಲೆಂದು ಚೀಲೂರಿಗೆ ಗುರುವಾರ ಭೇಟಿ ನೀಡಿದ್ದ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್​.ಈಶ್ವರಪ್ಪ ಅವರ ಕೈಗೆ ಕಾರ್ಮಿಕರು ದೇಣಿಗೆಯ ಚೆಕ್​ ಇಟ್ಟರು.

    ಇದನ್ನೂ ಓದಿ ಮಹಿಳಾ ಕೂಲಿಕಾರ್ಮಿಕರ ಬೇಡಿಕೆಗೆ ನೋ ಎಂದ ಸಚಿವರು! ಅವರು ಕೇಳಿದ್ದಾದರೂ ಏನು?

    ಪರಿಹಾರ ನಿಧಿಗೆ ತಮ್ಮ ಕೈಲಾದ ಸಹಾಯ ಮಾಡಲು ನಿತ್ಯ 270 ರೂ. ಕೂಲಿCM Relief Fund ಸಂಪಾದಿಸುವ ದಿನಗೂಲಿ ಕಾರ್ಮಿಕರು ಈ ಮೊದಲೇ ನಿರ್ಧರಿಸಿದ್ದರು. ಅದರಂತೆ ತಲಾ ಐವರ 5 ತಂಡ ಮಾಡಿಕೊಂಡು ಅಲ್ಪಸ್ವಲ್ಪ ಕೂಡಿಟ್ಟಿದ್ದ ಹಣವನ್ನೇ ಸಂಗ್ರಹಿಸಿತ್ತು. ಸಚಿವರು ತಮ್ಮೂರಿಗೆ ಬರುತ್ತಾರೆ ಎಂದು ಈ ಮೊದಲೇ ಮಾಹಿತಿ ಇದ್ದ ಅವರು ಹಣ ಒಗ್ಗೂಡಿಸಿ 35 ಸಾವಿರ ರೂ. ಚೆಕ್​ ತೆಗೆದಿದ್ದರು. ಸಚಿವರಿಗೂ ಇದು ತಿಳಿದಿರಲಿಲ್ಲ. ಕಾರ್ಮಿಕರು ಚೆಕ್​ ಕೊಟ್ಟದ್ದು ಅವರಿಗೂ ಶಾಕ್​!

    ಕೋವಿಡ್​-19 ಇಡೀ ಜಗತ್ತೇ ತಲ್ಲಣಗೊಳ್ಳುವಂತೆ ಆರೋಗ್ಯ ತುರ್ತು ಪರಿಸ್ಥಿತಿ ತಂದೊಡ್ಡಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ದಿನಗೂಲಿಕಾರರು ದೇಣಿಗೆ ನೀಡಿರುವುದು ಇತರರಿಗೆ ಮಾದರಿ.

    ಇದನ್ನೂ ಓದಿ VIDEO| ಕೆಎಂಎಫ್ ಗೆ ರೈತರು ಪೂರೈಸುವ ಹಾಲಿಗೆ ರಾಜ್ಯಾದ್ಯಂತ ಶೀಘ್ರ ಏಕರೂಪದ ದರ: ಬಾಲಚಂದ್ರ ಜಾರಕಿಹೊಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts