More

    ಚುನಾವಣಾ ಸಮಾವೇಶದಲ್ಲಿ ಗಾಯಗೊಂಡ ಮಮತಾ ಬ್ಯಾನರ್ಜಿ: ನನ್ನ ಮೇಲೆ ಸಂಚು ನಡೆದಿದೆ ಎಂದ ದೀದಿ

    ಕಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ರಾಲಿ ವೇಳೆ ಗಾಯಗೊಂಡಿರುವ ಘಟನೆ ಬುಧವಾರ ನಂದಿಗ್ರಾಮದಲ್ಲಿ ನಡೆದಿದೆ. ಅವರ ಕಾಲಿಗೆ ಮತ್ತು ಮುಖಕ್ಕೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

    ‘ಯಾರೋ ಕಿಡಗೇಡಿಗಳು ನನ್ನನ್ನು ಬಲವಾಗಿ ನೂಕಿದ್ದರಿಂದ ಬಲಗಾಲಿಗೆ ಗಾಯವಾಗಿದೆ, ಮುಖವನ್ನು ಕೈ ಬೆರಳುಗಳಿಂದ ಪರಚಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದು ನನ್ನ ಮೇಲೆ ಹಲ್ಲೆ ಮಾಡುವ ಅಥವಾ ನನ್ನನ್ನು ಮುಗಿಸುವ ಸಂಚು ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ. ಕಲ್ಕತ್ತಕ್ಕೆ ತೆರಳಿದ ಅವರು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

    ನಂದಿಗ್ರಾಮದಲ್ಲಿ ಬುಧವಾರ ಟಿಎಂಸಿ ಪಕ್ಷದ ಚುನಾವಣಾ ರಾಲಿ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಅವರು ಸ್ಥಳೀಯ ದುರ್ಗಾ ಮಾತೆ ಮಂದಿರಕ್ಕೆ ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲು ಮಮತಾ ನಿರ್ಧರಿಸಿದ್ದಾರೆ.

    ಇದನ್ನೂ ಓದಿ: ಮಹಿಳೆಗೆ ರಕ್ತ ಬರುವಂತೆ ಹೊಡೆದಿದ್ದ ಜೊಮ್ಯಾಟೊದ ಸಿಬ್ಬಂದಿ ಬಂಧನ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಬಂಗಾಳ ಬಿಜೆಪಿ ಮುಖಂಡರು, ಮಮತಾ ಡ್ರಾಮಾ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮೂನ್ನೂರಕ್ಕೂ ಹೆಚ್ಚು ಪೊಲೀಸ್ ಭದ್ರತೆ ಇರುವ ಮಮತಾರ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ, ಒಂದು ವೇಳೆ ಹಾಗೇನಾದರೂ ಆಗಿದ್ದರೇ ಪೊಲೀಸರು ಏಕೆ ಸಂಬಂಧಿಸಿದವರನ್ನು ಇನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.

    ಪ್ರಣಾಳಿಕೆ ನಾಳೆ ಬಿಡುಗಡೆ: ಮಮತಾ ಬ್ಯಾನರ್ಜಿ ಅವರು ಗುರುವಾರ ಮಾರ್ಚ್ 11 ರಂದು ಟಿಎಂಸಿ ಪಕ್ಷದ ಪ್ರಣಾಳಿಕೆಯನ್ನು ಕಾಳಿಘಾಟ್​​ನಲ್ಲಿನ ತಮ್ಮ ನಿವಾದಲ್ಲಿ ಬಿಡುಗಡೆ ಮಾಡಲಿದ್ದಾರೆ.

    ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

    ಮಾಡೆಲಿಂಗ್​ ಕನಸಿನೊಂದಿಗೆ ಬೆಂಗಳೂರಿಗೆ ಹೊರಟಿದ್ದ ಯುವತಿ ನೇಣಿಗೆ ಶರಣು! ಸಾವಿನ ಹಿಂದೆ ಗಾಂಜಾ ಮಾಫಿಯಾದ ಕೈ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts