More

    ಸರ್ಕಾರಕ್ಕೆ ಹಣ ಬೇಕು…ಸ್ಯಾಲರಿ ಹೇಗೆ ಕೊಡೋದು? ತೆಲಂಗಾಣದಲ್ಲಿ ಸಿಎಂ ಸೇರಿ ಎಲ್ಲ ಜನಪ್ರತಿನಿಧಿಗಳ ಏಪ್ರಿಲ್ ತಿಂಗಳ ವೇತನದಲ್ಲಿ ಶೇ.75 ಕಟ್​

    ತೆಲಂಗಾಣ: ಕರೊನಾ ವೈರಸ್​ ಪ್ರಸರಣದ ಪ್ರಮಾಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿದೆ. ಹಾಗೇ ಸರ್ಕಾರಗಳ ಖರ್ಚು ಹೆಚ್ಚಾಗಿದೆ.

    ಕೆಲಸವಿಲ್ಲದೆ, ಹೊಟ್ಟೆಗಿಲ್ಲದೆ ಪರದಾಡುತ್ತಿರುವ ಅದೆಷ್ಟೋ ವಲಸೆ ಕಾರ್ಮಿಕರು, ದಿನಗೂಲಿ ನೌಕರರ ಜವಾಬ್ದಾರಿಯನ್ನು ಸರ್ಕಾರಗಳು ತೆಗೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಅದು ಇಡೀ ದೇಶಕ್ಕೆ ಮಾದರಿಯಾಗಬಹುದು.

    ರಾಜ್ಯದಲ್ಲಿ ತಮ್ಮನ್ನೂ ಸೇರಿಸಿ, ಎಲ್ಲ ಜನಪ್ರತಿನಿಧಿಗಳ ಏಪ್ರಿಲ್​ ತಿಂಗಳ ವೇತನದಲ್ಲಿ ಶೇ.75ರಷ್ಟು ಕಡಿತಗೊಳಿಸಲಾಗುವುದು. ಆ ಹಣ ಸರ್ಕಾರಕ್ಕೆ ಉಳಿಯುತ್ತದೆ. ಕರೊನಾ ವಿರುದ್ಧ ಹೋರಾಟಕ್ಕೆ, ಲಾಕ್​ಡೌನ್​ ಸಂತ್ರಸ್ತರ ಅಗತ್ಯ ಪೂರೈಕೆಗೆ ಅದನ್ನು ಬಳಸಿಕೊಳ್ಳಲಾಗುವುದು ಎಂದು ಕೆಸಿಆರ್​ ಸೋಮವಾರ ಘೋಷಿಸಿದ್ದಾರೆ.

    ರಾಜ್ಯದ ಸಚಿವರಿಂದ ಹಿಡಿದು, ಸ್ಥಳೀಯ ಆಡಳಿತಗಳ ಜನಪ್ರತಿನಿಧಿಗಳು, ಎಂಎಲ್​ಸಿಗಳು, ಎಲ್ಲ ಶಾಸಕರ ಏಪ್ರಿಲ್​ ತಿಂಗಳ ವೇತನದಲ್ಲಿ ಶೇ.75 ಕಡಿತವಾಗಲಿದ್ದು, ಶೇ.25ರಷ್ಟು ಮಾತ್ರ ಅವರ ಪಾಲಿಗೆ ಸಿಗಲಿದೆ.
    ಹಾಗೇ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಗಳಂತಹ ರಾಜ್ಯ ಸರ್ಕಾರಿ ಸಂಸ್ಥೆಗಳಿಗೂ ಇದೇ ನಿಯಮ ಅನ್ವಯ ಆಗಲಿದೆ.

    ನಾಗರಿಕ ಸೇವಕರು(ಸಿವಿಲ್​ ಸರ್ವಂಟ್ಸ್), ಪೊಲೀಸ್​, ವಿದೇಶಿ ವಿನಿಮಯ ಸೇವೆಯಲ್ಲಿರುವ ಅಧಿಕಾರಿಗಳು ಸೇರಿ ಇನ್ನುಳಿದ ಎಲ್ಲ ಕೇಂದ್ರ ಸೇವಾ ಅಧಿಕಾರಿಗಳ ವೇತನದಲ್ಲಿ ಶೇ.60 ರಷ್ಟು ಕಡಿತವಾಗಿದೆ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಪೆನ್ಷನ್​ ಹಣವನ್ನು ಶೇ.50ರಷ್ಟು ಮಾತ್ರ ಪಾವತಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

    ಕರೊನಾ ವೈರಸ್​ ತೀವ್ರತೆ ತೆಲಂಗಾಣದ ಆರ್ಥಿಕತೆಯ ಮೇಲೆ ತುಂಬ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts