More

    ನಾಳೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಸಿಎಂ ತುರ್ತು ಸಭೆ; ಕೈಮೀರಿ ಹೋಗುತ್ತಿರುವ ಕರೊನಾ ನಿಯಂತ್ರಣಕ್ಕೆ ಮತ್ತಷ್ಟು ಕ್ರಮ

    ಬೆಂಗಳೂರು: ಕರೊನಾ ಎರಡನೇ ಅಲೆಯ ಪೈಕಿ ಅತಿ ಹೆಚ್ಚು ಎಂದರೆ 48 ಸಾವಿರಕ್ಕೂ ಅಧಿಕ ಕೋವಿಡ್‌ ಕೇಸ್‌ ಇವತ್ತೊಂದೇ ದಿನ ವರದಿಯಾಗಿದ್ದು, ಕೈಮೀರಿ ಹೋಗುತ್ತಿರುವ ಕರೊನಾ ಹಾವಳಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮತ್ತಷ್ಟು ಹರಸಾಹಸ ಪಡಲು ಮುಂದಾಗಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡುವ ಮೊದಲೇ ಅದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಈ ಸಂಬಂಧ ನಾಳೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ತುರ್ತು ಸಭೆ ನಡೆಸಲು ನಿರ್ಧರಿಸಿದ್ದಾರೆ.

    ರಾಜ್ಯದಲ್ಲಿ ನಿನ್ನೆಯೊಂದೇ ದಿನ 270 ಮಂದಿ ಕರೊನಾಗೆ ಬಲಿಯಾಗಿದ್ದು, 35 ಸಾವಿರಕ್ಕೂ ಹೆಚ್ಚು ಪ್ರಕರಣಗಳ ದಾಖಲಾಗಿದ್ದವು. ಅದಾಗಿ 24 ಗಂಟೆಗಳಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆ ಎಂದರೆ 217 ಇದ್ದರೂ ಹೊಸದಾಗಿ ಕೋವಿಡ್‌ ಸೋಂಕಿಗೆ ಒಳಗಾದವರ ಪ್ರಕರಣ ನಿನ್ನೆಗಿಂತಲೂ 13 ಸಾವಿರ ಹೆಚ್ಚಾಗಿದೆ. ಈಗಾಗಲೇ ರಾಜ್ಯದಲ್ಲಿ ಸೋಂಕಿತರು ಹಾಸಿಗೆ, ಐಸಿಯು, ಆಮ್ಲಜನಕ ಮಾತ್ರವಲ್ಲದೆ ಸೂಕ್ತ ಔಷಧ ಕೂಡ ಸಿಗದೆ ಪರದಾಡಲಾರಂಭಿಸಿದ್ದಾರೆ.

    ಕೋವಿಡ್‌ ಪಾಸಿಟಿವ್‌ ಕೇಸ್‌ಗಳ ಪ್ರಕರಣ ಹೀಗೇ ಮುಂದುವರಿದರೆ ಪರಿಸ್ಥಿತಿ ಚಿಂತಾಜನಕ ಆಗಲಿರುವ ಮುನ್ಸೂಚನೆ ಅರಿತ ಸಿಎಂ ಯಡಿಯೂರಪ್ಪ, ನಾಳೆ ಸಂಜೆ 4.30ರ ಸುಮಾರಿಗೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ತುರ್ತು ಸಭೆ ನಡೆಸಲಿದ್ದಾರೆ. ಲಾಕ್‌ಡೌನ್‌ ಮಾಡಿದರೂ ಕರೊನಾ ನಿಯಂತ್ರಣಕ್ಕೆ ಸಿಗದಿರುವುದು, ಖಾಸಗಿ ಆಸ್ಪತ್ರೆಗಳು ಸರ್ಕಾರ ಸೂಚಿಸಿದಷ್ಟು ಬೆಡ್ ಬಿಟ್ಟು ಕೊಡದಿರುವುದು ಸೇರಿ ಹಲವಾರು ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚೆ ಆಗಲಿದೆ.

    ಇದನ್ನೂ ಓದಿ: ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ 

    ನಮಗೆ ಹಿಂದಿನ ವರ್ಷದ ಹಳೆಯ ಬಿಲ್ ಕ್ಲಿಯರ್ ಮಾಡಿಲ್ಲ ಎಂದು ಕೆಲವು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ದೂರುತ್ತಿದ್ದಾರೆ. ಅದಾಗ್ಯೂ ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹಾಕುತ್ತಿದ್ದು, ಅಕ್ರಮದ ಅನುಮಾನ ಕಾಡುತ್ತಿದೆ ಎಂದು ಸಚಿವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಸಿಎಂ ಈ ತುರ್ತು ಸಭೆ ಕರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಅವರು ಬೆಡ್‌-ಆಕ್ಸಿಜನ್‌ ಕೊರತೆ ಸೇರಿ ಇತರ ವಿಷಯಗಳ ಕುರಿತು ಚರ್ಚೆ ನಡೆಸುವ ಹಾಗೂ ಅಗತ್ಯಕ್ಕಿಂತ ಹೆಚ್ಚು ಬೆಡ್‌ಗಳನ್ನು ನೀಡಿ ಸಹಕರಿಸುವಂತೆ ಖಾಸಗಿ ಆಸ್ಪತ್ರೆಗಳವರ ಬಳಿ ಕೋರುವ ಸಾಧ್ಯತೆಗಳೂ ಇವೆ.

    ಇವತ್ತೊಂದೇ ದಿನ 217 ಮಂದಿ ಕೋವಿಡ್‌ಗೆ ಬಲಿ, ಇಂದು 48 ಸಾವಿರ ಕರೊನಾ ಕೇಸ್‌; ನಿನ್ನೆಗಿಂತ 13 ಸಾವಿರ ಹೆಚ್ಚಳ!

    ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕರೊನಾ ಆಘಾತ; ‘ನೆಮ್ಮದಿಯಾಗಿ ನಿದ್ರಿಸಿ’ ಎಂದವರು ಚಿರನಿದ್ರೆಗೆ…

    ಎರಡು ವಾಹನಗಳ ಮಧ್ಯೆ ಅಪ್ಪಚ್ಚಿಯಾಗಿ ಧಗಧಗ ಉರಿದ ಆಂಬುಲೆನ್ಸ್;‌ ಒಳಗಿದ್ದವರು ಹೊರಟಿದ್ದು ನಿಮ್ಹಾನ್ಸ್‌ಗೆ, ಸೇರಿದ್ದು ವಿಕ್ಟೋರಿಯಾಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts