More

  ಸ್ವಿಜರ್ಲ್ಯಾಂಡ್​ನ ವಿಶ್ವ ಆರ್ಥಿಕ ಶೃಂಗಸಭೆ ಭಾಗವಹಿಸಲು ದಾವೋಸ್​ಗೆ ಪ್ರಯಾಣ ಬೆಳಸಿದ ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್​ ಶೆಟ್ಟರ್​ ಸಾಥ್​

  ಬೆಂಗಳೂರು: ಸ್ವಿಜರ್ಲ್ಯಾಂಡ್​ನ ದಾವೋಸ್​ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ದಾವೋಸ್​ಗೆ ತೆರಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

  ದಾವೋಸ್​ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ 35 ಕಂಪನಿಗಳ ಜತೆ ಚರ್ಚೆಗೆ ನಡೆಸಲಿರುವ ಮುಖ್ಯಮಂತ್ರಿ. ಈ ಎಲ್ಲ ಪ್ರಯತ್ನಗಳಿಂದ ರಾಜ್ಯದಲ್ಲಿ ಉದ್ಯೋಗಾವಕಾಶ ಹೆಚ್ಚಾಗಲಿದೆ. ಈಗ ಕರ್ನಾಟಕದಲ್ಲಿ ಆರ್ಥಿಕ ಪ್ರಗತಿ ಚೆನ್ನಾಗಿದೆ. ಸಚಿವ ಜಗದೀಶ್ ಶೆಟ್ಟರ್ ಕೂಡ ನನ್ನ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಬರುತ್ತಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

  ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಮಾತಾಡಿದ್ದೇನೆ. ದಾವೋಸ್ ನಿಂದ ಬಂದ ನಂತರ ಸಂಪುಟ ವಿಸ್ತರಣೆ ಆಗುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಬೆಳಗ್ಗೆ 10.15 ವಿಮಾನದಲ್ಲಿ ದಾವೋಸ್ ಗೆ ಪ್ರಯಾಣ ಬೆಳಸಲಿರೋ ಮುಖ್ಯಮಂತ್ರಿ ಬಿಎಸ್​ವೈ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದರು.

  ದುಬೈ ಮಾರ್ಗವಾಗಿ ಸ್ವಿಜರ್ಲ್ಯಾಂಡ್ ನ ದಾವೋಸ್​ಗೆ ಸಚಿವ ಶೆಟ್ಟರ್​ ಜತೆ ಸಿಎಂ ಪ್ರಯಾಣ ಬೆಳಸಲಿದ್ದಾರೆ. ಜನವರಿ 24ರಂದು ಬೆಂಗಳೂರಿಗೆ ವಾಪಸಾಗಲಿರೋ ಸಿಎಂ ಮತ್ತು ಸಚಿವ.

  ದಾವೋಸ್​ಗೆ ಸಿಎಂ ಪ್ರಯಾಣ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲನಿಯ ಧವಳಗಿರಿ ನಿವಾಸದಲ್ಲಿ ಸಚಿವ ಪ್ರಭು ಚೌಹಾಣ್, ಯಲಹಂಕ ಶಾಸಕ ವಿಶ್ವನಾಥ್ ಮತ್ತು ಮಾಜಿ ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕರಾದ ಸುರೇಶ್ ಗೌಡ, ವೈ.ಎ. ನಾರಾಯಣ ಸ್ವಾಮಿ ಭೇಟಿ ನೀಡಿದ್ದರು. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts