More

  ಆನ್​ಲೈನ್ ಮೂಲಕ ಭೂ ಪರಿವರ್ತನೆ, ಉದ್ಯಮಗಳಿಗೆ ಜಮೀನು ನೀಡಲು ಕಾಯ್ದೆ ಸರಳೀಕರಣ: ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ

  ಬೆಂಗಳೂರು: ಉದ್ಯಮಗಳಿಗೆ ಜಮೀನು ನೀಡುವ ವಿಚಾರದಲ್ಲಿ ಕೆಲವು ಬದಲಾವಣೆ ತರಲಾಗುತ್ತಿದೆ. ಕಾಯ್ದೆ ಸರಳೀಕರಣಕ್ಕೆ ತಕ್ಷಣ ತಿದ್ದುಪಡಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

  ಸಿಎಂ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ, ದಾವೋಸ್ ಪ್ರವಾಸ ಕುರಿತು ಮಾಹಿತಿ ನೀಡಿದರು.

  ಆನ್​ಲೈನ್ ಮೂಲಕ ಭೂ ಪರಿವರ್ತನೆ ಮಾಡಲು ನಿರ್ಧಾರಿಸಲಾಗಿದೆ. 30 ದಿನದಲ್ಲಿ ಭೂ ಪರಿವರ್ತನೆಯಾಗದಿದ್ದರೆ ಅದನ್ನು ಡೀಮ್ಡ್ ಭೂ ಪರಿವರ್ತನೆ ಎಂದು ಪರಿಗಣಿಸಲಾಗುವುದು. ಇದರಿಂದ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗಲಿದೆ ಎಂದರು.

  ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ನೋ ರಿಯಾಕ್ಷನ್ ಎಂದರು. ಇಂದು ದಾವೋಸ್ ಪ್ರವಾಸ್ ಬಗ್ಗೆ ಮಾತ್ರ ಸುದ್ದಿಗೋಷ್ಠಿ. ಹಾಗಾಗಿ ಆ ಬಗ್ಗೆ ಮಾತ್ರ ಪ್ರಶ್ನಿ ಕೇಳಿ ಎಂದು ಮಂದಹಾಸ ಬೀರಿದರು.

  ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತಿರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts