More

    ಅಯೋಧ್ಯೆಗೆ ತೆರಳಿದ್ದ ಬೀದರ್​ನ 7 ಮಂದಿ ಸಾವು, 9 ಜನರಿಗೆ ಗಾಯ; ಸಂತ್ರಸ್ತರ ನೆರವಿಗಾಗಿ ಯೋಗಿ ಆದಿತ್ಯನಾಥ್​ ಜೊತೆ ಬೊಮ್ಮಾಯಿ ಮಾತುಕತೆ

    ಬೆಂಗಳೂರು: ಅಯೋಧ್ಯೆ ಯಾತ್ರೆಗೆ ತೆರಳಿದ್ದ ಬೀದರ್ ಜಿಲ್ಲೆಯ ಪ್ರವಾಸಿಗರ ತಂಡದ ಮಿನಿ‌ ಬಸ್‌ (ಟೆಂಪೊ ಟ್ರಾವೆಲರ್) ಉತ್ತರ ಪ್ರದೇಶದ ಲಖೀಂಪುರ್ ಖೇರಿ ಬಳಿ ಅಪಘಾತಕ್ಕೀಡಾಗಿ ಒಂದೇ ಕುಟುಂಬದ ಏಳು ಜನರು ಮೃತಪಟ್ಟು, 9 ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಅವರ ಜತೆ ಮಾತುಕತೆ ನಡೆಸಿದ್ದಾರೆ.

    ಅಪಘಾತ ಸಂಭವಿಸಿದ ಸ್ಥಳದಲ್ಲಿ ಜಿಲ್ಲಾಡಳಿತ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಾಜ್ಯದ ಪ್ರವಾಸಿಗರ ಸುರಕ್ಷತೆ, ಅವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

    ಗಾಯಾಳುಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಜೊತೆಗೆ ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿರುವ ಬೊಮ್ಮಾಯಿ, ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

    ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..

    ಯಾವ ಹುಡ್ಗಿಯೂ ಮದ್ವೆಗೆ ಒಪ್ಪಲಿಲ್ಲ ಎಂದು ಬೇಸತ್ತ ಯುವಕ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts