More

    ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಸರ್ಕಾರದ ಜನೋತ್ಸವ ರದ್ದು; ಮಧ್ಯರಾತ್ರಿ ಸುದ್ದಿಗೋಷ್ಠಿಯಲ್ಲಿ ಸಿಎಂ ಘೋಷಣೆ

    ಬೆಂಗಳೂರು: ದಕ್ಷಿಣಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ್​ ನೆಟ್ಟಾರ್ ಕೊಲೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಸಿಎಂ ಈ ವಿಷಯ ಪ್ರಕಟಿಸಿದ್ದಾರೆ.

    ಒಬ್ಬ ಅತ್ಯಂತ ಅಮಾಯಕ ಯುವಕನನ್ನು ಸಂಚಿನಿಂದ ಯೋಜನಾಬದ್ಧವಾಗಿ ಕೊಲೆ ಮಾಡಿದ್ದು ಅಮಾನವೀಯ, ಖಂಡನೀಯ. ಮಾತುಗಳಲ್ಲಲ್ಲ ಮನಸ್ಸಲ್ಲೂ ಆಕ್ರೋಶವಿದೆ. ಹರ್ಷ ಕೊಲೆ ನಡೆದ ಕೆಲವೇ ದಿನಗಳಲ್ಲಿ ಈ ಘಟನೆ ಆಗಿರುವುದು ಮನಸಿಗೆ ಘಾಸಿ ಮಾಡಿದೆ. ರಾಜ್ಯಾಧ್ಯಕ್ಷರು ಪ್ರವೀಣ್ ಮನೆಗೆ ತೆರಳಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ ಎಂದು ಸಿಎಂ ವಿವರಿಸಿದರು.

    ಒಂದು ಕಡೆ ಕಾರ್ಯಕರ್ತನ ಕೊಲೆಯಾಗಿದೆ. ಇನ್ನೊಂದೆಡೆ ನನ್ನ ಸರ್ಕಾರಕ್ಕೆ ನಾಳೆ ಒಂದು ವರ್ಷ, ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಲಿದೆ. ಜನೋತ್ಸವ ನಡೆಸಲಿದ್ದುದರ ಉದ್ದೇಶ ಜನಪರವಾಗಿ ಏನು ಕೆಲಸ ಮಾಡಿದ್ದೇವೆ ಅದನ್ನು ಜನತೆಗೆ ತಿಳಿಸುವುದಾಗಿತ್ತು. ಆದರೆ ಈ ಸಂದರ್ಭದಲ್ಲಿ ಜನೋತ್ಸವ ನಡೆಸದಿರಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಹೇಳಿದರು.

    ಜನರಲ್ಲಿ ಜನೋತ್ಸವದಿಂದ ಆತ್ಮವಿಶ್ವಾಸ ಮೂಡಿ ಬರುವ ದಿನಗಳಲ್ಲಿ ಭರವಸೆ ಮೂಡಿಸಲು ಉದ್ದೇಶ ಇರಿಸಿಕೊಳ್ಳಲಾಗಿತ್ತೇ ವಿನಹ ಇದು ಸಂಭ್ರಮಿಸಲು ಅಲ್ಲ. ನಾನು ಇಂದು ಇಡೀ ದಿನ ಬೇರೆ ಕಾರ್ಯಕ್ರಮಗಳಲ್ಲಿದ್ದರೂ ಮನಸಿಗೆ ಶಾಂತಿ ಇರಲಿಲ್ಲ. ಪ್ರವೀಣ್ ತಾಯಿ, ಅವರ ಮನೆಯವರು, ಹರ್ಷನ ತಾಯಿ ಆಕ್ರಂದನ ನೋಡಿ ದೊಡ್ಡಬಳ್ಳಾಪುರದ ಜನೋತ್ಸವ ಕಾರ್ಯಕ್ರಮ ಹಾಗೂ ವಿಧಾನಸೌಧದಲ್ಲಿನ ಕಾರ್ಯಕ್ರಮ ಕೂಡ ರದ್ದು ಮಾಡಿದ್ದೇವೆ. ಆದರೆ ಬಡಜನರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಗುರುವಾರ ಸುದ್ದಿಗೋಷ್ಠಿ ಮೂಲಕ ತಿಳಿಸಲಿದ್ದೇನೆ.

    ಇನ್ನು ಈ ಜನೋತ್ಸವಕ್ಕೆ ಬಹಳಷ್ಟು ಜನರು ಬರಲಿದ್ದರು. ಅವರಿಗೆ ಆದ ಅನನುಕೂಲಕ್ಕೆ, ಆ ಭಾಗದ ಜನರು, ನಾಯಕರು, ಕಾರ್ಯಕರ್ತರೆಲ್ಲ ಕ್ಷಮೆ ಕೋರುತ್ತೇನೆ ಎಂಬುದಾಗಿ ಬಸವರಾಜ ಬೊಮ್ಮಾಯಿ ಹೇಳಿದರು.

    ಕೌತುಕ ಕೆರಳಿಸಿತ್ತು ಮಧ್ಯರಾತ್ರಿಯ ಸುದ್ದಿಗೋಷ್ಠಿ

    ಪ್ರವೀಣ್ ಹತ್ಯೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಭಾರಿ ಸಂಚಲನ ಉಂಟಾಗಿದ್ದು, ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಬಿಜೆಪಿ ಯುವ ಪದಾಧಿಕಾರಿಗಳ ರಾಜೀನಾಮೆ ಚಳವಳಿ ಆರಂಭವಾಯಿತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯರಾತ್ರಿಯಲ್ಲಿ ಸುದ್ದಿಗೋಷ್ಠಿ ಕರೆದರು. ತಡರಾತ್ರಿಯಲ್ಲಿ ಕರೆದಿದ್ದಕ್ಕೆ ಕ್ಷಮೆ ಕೋರುತ್ತಲೇ ಸಿಎಂ ಮಾತು ಆರಂಭಿಸಿದರು.

    ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೀಗೆ ಮಧ್ಯರಾತ್ರಿಯಲ್ಲಿ ಯಾವ ಮುಖ್ಯಮಂತ್ರಿ ಕೂಡ ಸುದ್ದಿಗೋಷ್ಠಿ ನಡೆಸಿಲ್ಲ. ಹೀಗಾಗಿ ಈ ಸುದ್ದಿಗೋಷ್ಠಿ ಕರೆಯುತ್ತಿದ್ದಂತೆ ರಾಜ್ಯದ ರಾಜಕೀಯ ವಲಯದಲ್ಲಿ, ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಭಾರಿ ಕುತೂಹಲ ಸೃಷ್ಟಿಯಾಗಿತ್ತು.

    ಬಿಜೆಪಿ ಹೈಕಮಾಂಡ್ ಗರಂ, ಪರಿಸ್ಥಿತಿ ನಿಯಂತ್ರಿಸಲು ತಾಕೀತು

    ಪ್ರವೀಣ್ ಹತ್ಯೆಯನ್ನು ಖಂಡಿಸಿ ಹಾಗೂ ಆ ಪ್ರಕರಣದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿಯ ಯುವ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದರಿಂದ ಮುಖ್ಯಮಂತ್ರಿಯವರ ಮೇಲೆ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ಆ ಬಗ್ಗೆ ಮಾಹಿತಿಯನ್ನು ಪಡೆದಿದ್ದು ಮಾತ್ರವಲ್ಲದೆ, ಪರಿಸ್ಥಿತಿ ಕೈಮೀರುವುದನ್ನು ಕೂಡಲೇ ನಿಯಂತ್ರಣ ಮಾಡಿ ಎಂದು ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಳವಳಿ ರೂಪ ತಳೆಯುತ್ತಿದೆ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ; ಪ್ರವೀಣ್ ಕೊಲೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

    ನನ್ನ ಪತಿಯ ಆತ್ಮಹತ್ಯೆಗೆ ಈಶ್ವರಪ್ಪನವರೇ ಕಾರಣ ಎಂದು ನಾನೂ ಆತ್ಮಹತ್ಯೆ ಮಾಡಿಕೊಳ್ಳುವೆ: ರೇಣುಕಾ ಪಾಟೀಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts