More

    ಹೃದ್ರೋಗದಲ್ಲಿ ಎಷ್ಟು ವಿಧ ಗೊತ್ತೇ?; ಇಲ್ಲಿದೆ ಹೃದಯದ ಕುರಿತ ಸಮಗ್ರ ಮಾಹಿತಿ.. ಬನ್ನಿ ಕೇಳಿ, ಪಾಲ್ಗೊಳ್ಳಿ, ತಿಳಿದುಕೊಳ್ಳಿ…

    ಬೆಂಗಳೂರು: ವಿಶ್ವ ಹೃದಯ ದಿನ ಪ್ರಯುಕ್ತ ಹೃದಯದ ಕುರಿತು ಹೆಚ್ಚಿನ ಅರಿವು ನೀಡುವ ನಿಟ್ಟಿನಲ್ಲಿ ವಿಜಯವಾಣಿ ಕ್ಲಬ್​ನಲ್ಲಿ ಸಂವಾದ ಹಮ್ಮಿಕೊಂಡಿದ್ದು, ಇದರಲ್ಲಿ ವೈದ್ಯರಾದ ಡಾ.ಸಿ.ಎನ್. ಮಂಜುನಾಥ್, ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಡಾ.ಕೆ.ಎಸ್​. ಸದಾನಂದ, ಡಾ.ಎಂ.ಆರ್. ಪ್ರಸಾದ್​, ಡಾ.ಗಿರಿಧರ ಕಜೆ, ಯೋಗಪರಿಣತ ಗೋಪಾಲಕೃಷ್ಣ ದೇಲಂಪಾಡಿ ಅವರು ಹೃದಯದ ಕುರಿತು ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಮಾತನಾಡುತ್ತಿದ್ದಾರೆ.

    ವಿಜಯವಾಣಿ ಕ್ಲಬ್​ನಲ್ಲಿ ನಡೆಯುತ್ತಿರುವ ಈ ಹೃದಯಸ್ಪರ್ಶಿ ಮಾತುಕತೆಯಲ್ಲಿ ಮೊದಲಿಗರಾಗಿ ಡಾ.ಸಿ.ಎನ್. ಮಂಜುನಾಥ್ ಅವರು ಮಾತನಾಡುತ್ತಿದ್ದು, ಹೃದಯ ಸಂಬಂಧಿ ರೋಗ ತಡೆಯುವ ನಿಟ್ಟಿನಲ್ಲಿ ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ ಎನ್ನುತ್ತ ಸಾಕಷ್ಟು ಮಾಹಿತಿ ನೀಡುತ್ತಿದ್ದಾರೆ. ಮುಷ್ಟಿ ಗಾತ್ರದ ಹೃದಯಕ್ಕೆ ಬೆಟ್ಟದಷ್ಟು ಕೆಲಸವಿದೆ. ಸಾಮಾನ್ಯವಾಗಿ ಹೃದಯಬಡಿತ ಒಂದು ನಿಮಿಷಕ್ಕೆ 70-85 ಇರುತ್ತದೆ. ಒಂದು ದಿನಕ್ಕೆ ಹೃದಯ ಒಟ್ಟು 1 ಲಕ್ಷ ಸಲ ಬಡಿದುಕೊಳ್ಳುವುದಷ್ಟೇ ಅಲ್ಲ, ಏಳರಿಂದ ಏಳೂವರೆ ಸಾವಿರ ಲೀಟರ್ ರಕ್ತವನ್ನು ಪಂಪ್​ ಮಾಡುತ್ತದೆ. ಇಷ್ಟೊಂದು ಒತ್ತಡದ ಕೆಲಸವನ್ನು ನಿರಂತರವಾಗಿ ಮಾಡುವ ಹೃದಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ತೀರಾ ಅಗತ್ಯ ಎಂಬ ಕಿವಿಮಾತನ್ನು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್

    ದೇಶದಲ್ಲಿ ಶೇ. 25ರಷ್ಟು ಸಾವು ಹೃದ್ರೋಗದಿಂದಲೇ ಸಂಭವಿಸುತ್ತಿದ್ದು, ಹೃದ್ರೋಗದಲ್ಲಿ ನಾಲ್ಕು ವಿಧಗಳಿವೆ. ಹುಟ್ಟಿನಿಂದಲೇ ಬರುವ ಹೃದ್ರೋಗ, ರಕ್ತನಾಳ ಬ್ಲಾಕ್​ ಆಗಿ ರಕ್ತ ಹೆಪ್ಪುಗಟ್ಟಿ ಸಂಭವಿಸುವ ಸಾಮಾನ್ಯ ಹೃದಯಾಘಾತ, ಹೃದಯದ ಕವಾಟಗಳಿಂದಾಗಿ ಬರುವ ರುಮ್ಯಾಟಿಕ್ ಹಾರ್ಟ್ ಡಿಸೀಸ್​, ಹೃದಯದ ಸ್ನಾಯುವಿನ ಶಕ್ತಿ ಕುಗ್ಗಿ ಬರುವ ಕಾರ್ಡಿಯೋ ಮಯೋಪಥಿ ಎಂದು ನಾಲ್ಕು ಬಗೆಯ ಹೃದ್ರೋಗಳಿಗೆ ಎಂದಿರುವ ಡಾ.ಸಿ.ಎನ್. ಮಂಜುನಾಥ್ ಅವರು ಹೇಳಿದ್ದು, ಹೃದಯದ ಕುರಿತು ಅವರು ಇನ್ನಷ್ಟು ಮಾಹಿತಿ ಹಂಚಿಕೊಳ್ಳಲಿದ್ದಾರೆ.

    ಜೊತೆಗೆ ಉಳಿದ ಎಲ್ಲ ವೈದ್ಯರೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಹೃದಯದ ಆರೋಗ್ಯದ ಕುರಿತು ಸಾಕಷ್ಟು ಟಿಪ್ಸ್ ನೀಡಲಿದ್ದಾರೆ. ನೀವು ಕೂಡ ಸಂವಾದದಲ್ಲಿ ಭಾಗಿಯಾಗಿ ಹೃದಯದ ಕುರಿತು ಅನುಮಾನ, ಇತರ ಮಾಹಿತಿ ಕೇಳಿ ತಿಳಿದುಕೊಳ್ಳಬಹುದು. ಈ ಸಂವಾದವನ್ನು ಸೇರಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್​ ಮಾಡಿ.

    https://www.clubhouse.com/event/mglzraOY

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts