ಪ್ರಕೃತಿ ಮೇಲಿನ ದೌರ್ಜನ್ಯದಿಂದ ವಾತಾವರಣದಲ್ಲಿ ವ್ಯತ್ಯಯ

blank

ಹೊಸನಗರ: ಇಂದು ತಾಪಮಾನ, ಮಳೆ, ಚಳಿ ಎಲ್ಲದರಲ್ಲೂ ವ್ಯತ್ಯಯವಾಗುತ್ತಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ಸಿ.ಎಂ.ಜೋಶಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಅಂಡಗದೋದೂರಿನ ಹೊನ್ನಮ್ಮ ಚಿಕ್ಕಮ್ಮ ದೇವಸ್ಥಾನದ ಆವರಣ ಮತ್ತು ಹಸ್ರಾಳಿ ಪ್ರದೇಶದಲ್ಲಿ ಸ್ಥಳೀಯರ ಸಹಯೋಗದೊಂದಿಗೆ ಅಂಡಗದೋದೂರು ಗ್ರಾಪಂ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಕೃತಿಕ ಸಂಪತ್ತನ್ನು ಜೋಪಾನ ಮಾಡಬೇಕಿದೆ. ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಸ್ತಕ್ಷೇಪದಿಂದಾಗಿ ನಮ್ಮ ಭವಿಷ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ಮಲೆನಾಡು ಎಂದರೆ ಒಳ್ಳೆಯ ವಾತಾವರಣ. ಇಲ್ಲಿಗೆ ಬರಲು ಎಲ್ಲರು ಹಾತೊರೆಯುತ್ತಾರೆ. ಅದಕ್ಕೆ ಕಾರಣ ಇಲ್ಲಿನ ಹಸಿರು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಈ ಸಂದರ್ಭದಲ್ಲಿ ಇಲ್ಲಿಗೆ ಬರಲಾಗದಷ್ಟು ಮಳೆ ಬರಬೇಕಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿದೆ. ಪರಿಸರವನ್ನು ಸಂರಕ್ಷಣೆ ಮಾಡಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ. ಹೈಕೋರ್ಟ್ ವಕೀಲ ಜಿ.ಎಸ್.ಪ್ರಸಾದ್ ಬುರುಮನೆ ಸ್ವಯಂ ಕಾಳಜಿಯಿಂದ ವನಮಹೋತ್ಸವ ನಡೆಸಿರುವುದು ಶ್ಲಾಘನೀಯ ಎಂದರು.
ವನಮಹೋತ್ಸವದ ಸಂಚಾಲಕ ಜಿ.ಎಸ್.ಪ್ರಸಾದ್ ಮಾತನಾಡಿ, ಇಂದು ಹಣ್ಣಿನ ಗಿಡ ಮರಗಳು ಕಣ್ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಂಡಗದೋದೂರು ಗ್ರಾಪಂ ಪರಿಸರದಲ್ಲಿ ಕಾಟು ಹಣ್ಣಿನ ಗಿಡಗಳನ್ನು ನೆಟ್ಟು, ನಿರ್ವಹಣೆ ಮಾಡಲಾಗಿದೆ. ಈಗಾಗಲೇ ಒಂದೂವರೆ ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದೆ. ಇದೇ ರೀತಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಎಕರೆ ಜಾಗ ಗುರುತಿಸಿದರೆ ಅಲ್ಲಿ ಗಿಡ ನೆಡುವುದರಿಂದ ಹಿಡಿದು ಸಂಪೂರ್ಣ ನಿರ್ವಹಣೆಯನ್ನು ನಾವೇ ನೋಡಿಕೊಳ್ಳುತ್ತೇವೆ. ನೇರಲೆ, ಮಾವು, ಹಲಸು, ಪುನರ‌್ಪಳಿ, ಹೆಬ್ಬಲಸು ಗಿಡಗಳನ್ನು ಮಾತ್ರ ಬೆಳೆಸಲಾಗುತ್ತದೆ ಎಂದರು.

Share This Article

ಬೇಸಿಗೆಯಲ್ಲಿ ಗುಂಗುರು ಕೂದಲಿನ ಆರೈಕೆ ಮಾಡುವುದು ಹೇಗೆ ಗೊತ್ತಾ? curly hair

curly hair: ಗುಂಗುರು ಕೂದಲು ತುಂಬಾ ಸುಂದರವಾಗಿ ಕಾಣುತ್ತದೆ, ಇದಕ್ಕೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನೀವು…

ಅಪ್ಪಿತಪ್ಪಿಯೂ ಈ ದಿನ ಪೊರಕೆಯನ್ನು ಖರೀದಿಸಬೇಡಿ! ಖಂಡಿತ ತೊಂದರೆಗೆ ಸಿಲುಕುತ್ತೀರಿ.. broom

broom: ಹಿಂದೂಗಳು ಪೊರಕೆಯನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸುತ್ತಾರೆ. ಭಕ್ತರು ಲಕ್ಷ್ಮಿ ದೇವಿಯು ಪೊರಕೆಗಳಲ್ಲಿ ವಾಸಿಸುತ್ತಾಳೆ…

ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ‘ಲೈಂಗಿಕ ಕೊಠಡಿಗಳು’! Prison

Prison: ಇಟಲಿ ಸರ್ಕಾರ ಒಂದು ವಿನೂತನ ನಿರ್ಧಾರ ತೆಗೆದುಕೊಂಡಿದೆ. ಕೈದಿಗಳ ಗೌಪ್ಯತೆಯ ಹಕ್ಕುಗಳನ್ನು ಗೌರವಿಸಿ, ಇಟಲಿ…