More

    ಜಯನಗರ ಕಾಂಪ್ಲೆಕ್ಸ್ ಸುತ್ತಲಿನ ಒತ್ತುವರಿ ತೆರವು

    ಬೆಂಗಳೂರು: ಜಯನಗರ ವಾಣಿಜ್ಯ ಸಂಕೀರ್ಣದ ಸುತ್ತಲಿನ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಮಳೆಗೆಗಳನ್ನು ನಿರ್ಮಿಸಿದ್ದ ಹಾಗೂ ಒತ್ತುವರಿ ಭಾಗಗಳನ್ನು ಬಿಬಿಎಂಪಿ ಮಂಗಳವಾರ ತೆರವುಗೊಳಿಸಿದೆ.

    ಎರಡು ದಿನಗಳ ಹಿಂದೆಯಷ್ಟೇ ಮಲ್ಲೇಶ್ವರದ 8ನೇ ಅಡ್ಡರಸ್ತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ವಹಿವಾಟು ನಡೆಸುತ್ತಿದ್ದ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿದ ಬೆನ್ನಲ್ಲೇ, ಪಾಲಿಕೆಯು ಜಯನಗರ ಕಾಂಪ್ಲೆಕ್ಸ್ ಬಳಿ ಹಲವು ಸಂಖ್ಯೆಯ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿತು. ಕಳೆದ ವಾರ ಈ ಸ್ಥಳಕ್ಕೆ ಸ್ಥಳೀಯ ಶಾಸಕರೊಂದಿಗೆ ಭೇಟಿ ನೀಡಿದ್ದ ಪಾಲಿಕೆ ಮುಖ್ಯ ಆಯುಕ್ತರಿಗೆ ಫುಟ್‌ಪಾತ್ ವ್ಯಾಪಾರದಿಂದ ಕಾಂಪ್ಲೆಕ್ಸ್‌ನಲ್ಲಿ ವ್ಯಾಪಾರ ಚಟುವಟಿಕೆಗೆ ಅಡ್ಡಿಯಾಗುತ್ತಿದೆ ಎಂಬ ದೂರನ್ನು ಆಲಿಸಿದ್ದರು. ಜತೆಗೆ ಸಾರ್ವಜನಿಕರು ಕೂಡ ಫುಟ್‌ಪಾತ್‌ನಲ್ಲಿ ಓಡಾಡಲು ಆಗದೆ ರಸ್ತೆ ಮೇಲೆ ನಡೆದಾಡುವ ಕಾರಣ ಅಪಘಾತಗಳು ಸಂಭವಿಸುತ್ತಿವೆ ಎಂಬುದಾಗಿ ದೂರು ಸಲ್ಲಿಸಿದ್ದರು.

    ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಲು ತೆರವು ಕಾರ್ಯಾಚರಣೆಯನ್ನು ಕೈಗೊಂಡಿದೆ. ವಾಣಿಜ್ಯ ಸಂಕೀರ್ಣದ 9ನೇ ಮುಖ್ಯರಸ್ತೆ, 10ನೇ ಮುಖ್ಯರಸ್ತೆ ಹಾಗೂ 27, 27ನೇ ‘ಎ‘ ಅಡ್ಡರಸ್ತೆ ಹಾಗೂ 30ನೇ ಅಡ್ಡರಸ್ತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಪಾಲಿಕೆಯ ಈ ಕ್ರಮಕ್ಕೆ ಹಲವು ಬೀದಿ ಬದಿ ವ್ಯಾಪಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಹಕ್ಕನ್ನು ಕಸಿದು ಹೊಟ್ಟೆ ಮೇಲೆ ಹೊಡೆಯುವ ಕ್ರಮವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ದೂರಿದರು.

    ಅಂಗವಿಕಲನ ಮಳಿಗೆ ತೆರವು:

    ಕಾಂಪ್ಲೆಕ್ಸ್ ಬಳಿಯ ರಸ್ತೆ ಮೇಲೆ ಅಂಗವಿಕಲನೊಬ್ಬ ಗೂಡಂಗಡಿಯಲ್ಲಿ ವಹಿವಾಟು ನಡೆಸುತ್ತಿದ್ದರು. ಇದು ಫುಟ್‌ಪಾತ್ ಮೇಲೆ ಇದ್ದರೂ, ಮಾನವೀಯತೆ ಕಾರಣದಿಂದ ಈವರೆಗೂ ತೆರವು ಮಾಡಿರಲಿಲ್ಲ. ಜೆಸಿಬಿ ವಾಹನ ಮೂಲಕ ಗೂಡಂಗಡಿಯನ್ನು ತೆರವು ಮಾಡಿದ್ದಕ್ಕೆ ಹಲವು ವ್ಯಾಪಾರಿಗಳು ತಗಾದೆ ಎತ್ತಿದರು. ದಲಿತ ಸಂಘಟನೆಯ ಕೆಲ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಾಲಿಕೆ ಅಧಿಕಾರಿಗಳು ಬಡವರ ಮೇಲೆ ಗದಾಪ್ರಹಾರ ನಡೆಸಿದ್ದಾರೆಂದು ಆಕ್ಷೇಪಿಸಿದರು. ಆದರೆ, ಪಾಲಿಕೆ ಸಿಬ್ಬಂದಿ ಗೂಡಂಗಡಿ ಸಹಿತ ಇತರ ಮಳಿಗೆಗಳನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿತು ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವುಮಾಡಿಕೊಡಲಾಯಿತು. ಸುಮಾರು 1 ಕಿ.ಮೀ. ಉದ್ದದಷ್ಟು ಪಾದಚಾರಿ ಮಾರ್ಗ ಹಾಗೂ ರಸ್ತೆಯಲ್ಲಿನ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು ಎಂದು ಪಾಲಿಕೆ ಇಂಜಿನಿಯರ್ ಮಂಜುನಾಥ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts