More

    ಸ್ವಚ್ಛತೆ ಜತೆಗೆ ಸುರಕ್ಷತೆ ಅಗತ್ಯ

    ಸಂಡೂರು: ಅಡುಗೆ ತಯಾರಿಸುವ ವೇಳೆ ಸ್ವಚ್ಛತೆ ಜತೆಗೆ ಸುರಕ್ಷತೆ ಅಗತ್ಯ ಎಂದು ತಾಪಂ ಎಡಿ ದುರುಗಪ್ಪ ಹೇಳಿದರು.

    ಇದನ್ನೂ ಓದಿ: ಸ್ವಚ್ಛತೆ ಪಾಲನೆ, ಪರಿಸರ ಸಂರಕ್ಷಣೆಗೆ ಜಾಗೃತಿ ಅಗತ್ಯ

    ಪಟ್ಟಣದ ತಾಪಂ ಆವರಣದಲ್ಲಿ ನಡೆದ ಶಾಲೆಗಳಲ್ಲಿ ಮದ್ಯಾಹ್ನದ ಬಿಸಿಯೂಟ ತಯಾರಿಸುವ ಅಡುಗೆದಾರರ ತರಬೇತಿಯಲ್ಲಿ ಶುಕ್ರವಾರ ಮಾತನಾಡಿದರು.
    ಆಡುಗೆ ಗ್ಯಾಸ್ ಹೇಗೆ ಉಪಯೋಗಿಸಬೇಕು, ಅದರಿಂದ ಯಾವ ರೀತಿ ಸುರಕ್ಷವಾಗಿರಬೇಕು ಹಾಗೂ ಆಡುಗೆ ಕೋಣೆ ಸ್ವಚ್ಛವಾಗಿ ಇಡುವುದರ ಜತೆಗೆ ಮಕ್ಕಳಿಗೆ ಹಾಲು ಕೊಡುವುದಕ್ಕಿಂತ ಮುಂಚೆ ಶುದ್ಧವಾದ ಪಾತ್ರೆಯಲ್ಲಿ ಕಾಸಿ ಕೊಡಿ.

    ಕಲಬುರಗಿಯಲ್ಲಿ ನಡೆದ ಪ್ರಕರಣ ಮರುಕಳಿಸಬಾರದೆಂದು ಮುಂಜಾಗ್ರತಾ ಕ್ರಮವಾಗಿ ಈ ತರಬೇತಿ ಎಂದರು. ಸಿಆರ್‌ಪಿಗಳಾದ ಬಂಡ್ರಿ ನಾಗರಾಜ, ಜಿಎಲ್.ಹಳ್ಳಿ ಓಬಳೇಶ, ಭುಜಂಗನಗರ ಶಾಂತಕುಮಾರ್, ಮೆಟ್ರಕಿ ರುದ್ರಯ್ಯಸ್ವಾಮಿ,

    ಅಕ್ಷರ ದಾಸೋಹ ಯೋಜನೆ ಎಫ್‌ಡಿಎ ಎಲ್.ಬಿ.ಶಂಕರರಾವ್, ಅಡುಗೆ ಸಂಘದ ಕಾರ್ಯದರ್ಶಿ ದ್ರಾಕ್ಷಾಯಿಣಿ, ಕೊಟ್ರಮ್ಮ, ಗೌರಮ್ಮ, ಸಂಶದ್ ಬೇಗಂ ಇತರರಿದ್ದರು. ತಾ.ಪಂ ಸಭಾಂಗಣದಲ್ಲಿ 40ಹಾಗೂ ಸಾಮರ್ಥ್ಯ ಸೌಧದಲ್ಲಿ 40 ಸೇರಿ ಒಟ್ಟು 80ಜನಕ್ಕೆ ಒಂದು ದಿನದಂತೆ 6ದಿನ ತರಬೇತಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts