More

    ಸ್ವಚ್ಚತೆ ಕಾಪಾಡುವುದು ಸಾರ್ವಜನಿಕರ ಕರ್ತವ್ಯ- ಶಾಸಕಿ ಎಂ.ಪಿ.ಲತಾ

    ಹರಪನಹಳ್ಳಿ: ಕಸಮುಕ್ತ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.

    ಇದನ್ನೂ ಓದಿ: ಸೆ.29ಕ್ಕೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಹೋಟೆಲ್​​​ಗಳಲ್ಲಿ ಸ್ವಚ್ಚತೆಗೆ ಇಲಾಖೆ ಸೂಚನೆ

    ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾನುವಾರ ಪುರಸಭೆಯವರು ಆಯೋಜಿಸಿದ್ದ ಕಸಮುಕ್ತ ಭಾರತ ಕಾರ್ಯಕ್ರಮಕ್ಕೆ ಕಸ ಗುಡಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಕಸವಿದ್ದಡೆ ಅನಾರೋಗ್ಯ ಇರುತ್ತದೆ, ಆದ್ದರಿಂದ ಮನೆ, ಓಣಿ ಸುತ್ತಲಿನ ಪರಿಸರದ ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಆರೋಗ್ಯಕ್ಕಾಗಿ ಸ್ವಚ್ಚತೆ ಅವಶ್ಯ. ಕೇವಲ ಒಂದು ದಿನ ಸ್ವಚ್ಚತೆ ಮಾಡಿ ಕೈ ಬಿಡಬೇಡಿ, ಪ್ರತಿ ತಿಂಗಳು ಒಂದು ದಿವಸ ಬೃಹತ್ ಸ್ವಚ್ಚತಾ ಅಭಿಯಾನ ಕೈಗೊಳ್ಳಿ, ತಿಂಗಳ ಒಳಗೆ ಕರಗುವ ಬೈಯೋಡಿಗ್ರಿ ಪ್ಲಾಸ್ಟಿಕ್‌ನ್ನು ಉಪಯೋಗಿಸಿ ಎಂದು ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಲಹೆ ನೀಡಿದರು.

    ಪ್ರವಾಸಿ ಮಂದಿರ ವೃತ್ತದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಾಂಧಿ ಮೆಮೋರಿಯಲ್ ಹಾಲ್‌ವರೆಗೂ ಪುರಸಭಾ ಸಿಬ್ಬಂದಿ, ಸದಸ್ಯರು, ವಿವಿಧ ಸಂಘಗಳ ಕಾರ್ಯಕರ್ತರು ಸ್ವಚ್ಚತಾ ಕಾರ್ಯ ಕೈಗೊಂಡರು.

    ವಿನಯಗೌಳಿ ಹಾಗೂ ಮುಖಂಡರಾದ ಬಿ.ಕೆ.ಪ್ರಕಾಶ, ವಾಗೀಶ, ಚಿಕ್ಕೇರಿ ಬಸಪ್ಪ, ಕಸಾಪ ಅದ್ಯಕ್ಷ ಉಚ್ಚೆಂಗೆಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಆರೋಗ್ಯ ನಿರೀಕ್ಷಕ ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts