More

    ಶುದ್ಧ ಓದು, ಬರಹಕ್ಕೆ ಶಾಲೆ, ಮನೆ ಬುನಾದಿ

    ಮೊಳಕಾಲ್ಮೂರು: ಮಾತೃ ಭಾಷೆಯ ಶುದ್ಧ ಓದು- ಬರಹ ಕಲಿಯುವ ಮಕ್ಕಳಿಗೆ ಮನೆ ಮತ್ತು ಶಾಲೆಯೇ ಬುನಾದಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

    ಪಟ್ಟಣದ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ, ಚಿತ್ರದುರ್ಗದ ಶ್ರೀ ಆಲೂರು ವೆಂಕಟರಾವ್ ಭಾಷಾ ತರಬೇತಿ ಕೌಶಲ ಕೇಂದ್ರದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಯ 6- 10ನೇ ತರಗತಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕನ್ನಡ ಕೈಬರಹ ಪ್ರಬಂಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಕ್ಕಳು ಪ್ರಬುದ್ಧತೆ ನಾಡು ಕಟ್ಟುವ ಕಣ್ಮಣಿಗಳು. ಕನ್ನಡ ಭಾಷೆಯಲ್ಲಿ ಶುದ್ಧ ಓದು- ಬರಹ ನೈಪುಣ್ಯತೆ ಪ್ರಗತಿಗೆ ಶಿಕ್ಷಕರ ಪಾತ್ರ ದೊಡ್ಡದು. ಅದರಂತೆ ಮನೆಯಲ್ಲಿ ಮಾತೃಭಾಷಾ ಕಲಿಕೆಗೆ ಪಾಲಕರು ಹೃದಯವಂತಿಕೆ ಮೆರೆಯಬೇಕು. ಇದಕ್ಕೆ ಉತ್ತೇಜನ ಕೊಟ್ಟಿರುವ ಆಲೂರು ವೆಂಕಟರಾವ್ ಭಾಷಾ ತರಬೇತಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

    ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಈರಣ್ಣ ಮಾತನಾಡಿ, ತಾಲೂಕು ಹಂತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜ. 31ರಂದು ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts