More

    ಸ್ವಚ್ಛ ಪರಿಸರ, ಸ್ವಸ್ಥ ಆರೋಗ್ಯ,

    ಅಳವಂಡಿ: ಪ್ರತಿಯೊಬ್ಬರು ಮನೆ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಇದು ರೋಗಗಳನ್ನು ಹರಡುವುದನ್ನು ತಡೆಗಟ್ಟಲಿದೆ. ಸ್ವಚ್ಚ ಪರಿಸರವಿದ್ದಲ್ಲಿ ಸ್ವಸ್ಥ ಆರೋಗ್ಯವಿರುತ್ತೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

    ಇದನ್ನೂ ಓದಿ: ಸ್ವಸ್ಥ ಭಾರತಕ್ಕಾಗಿ `ಮನ್ ಕಿ ಬಾತ್’ ಮೂಲಕ ಜನರ ಪ್ರೇರೇಪಣೆ

    ಸಮೀಪದ ಕಾತರಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ಸಾಂಕ್ರಾಮಿಕ ರೋಗಗಳು, ವೈಯಕ್ತಿಕ ಸ್ವಚ್ಚತೆ, ಲಸಿಕೆಗಳ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ ಜ್ಯೋತಿ ಹಿರೇಮಠ (ಪ್ರ), ಜ್ಯೋತಿ (ದ್ವಿ), ಸೌಜನ್ಯ (ತೃ) ಬಹುಮಾನ ವಿತರಿಸಿದರು.

    ಮಲೇರಿಯಾ, ಡೆಂಗ್ಯೂ, ಚಿಕನಗುನ್ಯಾ ಮುಂತಾದ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ಸಾರ್ವಜನಿಕರು ಜಾಗೃತಿಗೊಂಡಲ್ಲಿ ಇವುಗಳನ್ನು ತಡೆಗಟ್ಟಬಹುದು. ಮನೆಯ ನೀರಿನ ತೊಟ್ಟಿ, ಡ್ರಮ್‌ಗಳನ್ನು ಆಗಾಗ ಖಾಲಿ ಮಾಡಿ ಸ್ವಚ್ಚಗೊಳಿಸಿ.

    ಮನೆ ಅಕ್ಕ ಪಕ್ಕ ನೀರು ಬಹಳ ದಿನ ನಿಲ್ಲದಂತೆ ನೋಡಿಕೊಳ್ಳಿ. ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಿಕೊಳ್ಳುತ್ತವೆ. ಸ್ವಚ್ಚತೆ ಬಗ್ಗೆ ಮಕ್ಕಳು ಪಾಲಕರಲ್ಲಿ ಜಾಗೃತಿ ಮೂಡಿಸಿ ಎಂದರು.

    ಮುಖ್ಯ ಶಿಕ್ಷಕ ಶರಣಪ್ಪ ಮೂಲಿಮನಿ, ಸಮುದಾಯ ಆರೋಗ್ಯ ಸುರಕ್ಷತಾಧಿಕಾರಿ ಮರದಾನಬೀ, ಆರೋಗ್ಯ ನೀರಿಕ್ಷಣಾಧಿಕಾರಿ ಜ್ಯೋತಿ, ಶಿಕ್ಷಕರಾದ ಶಾಂತಾ, ಮಹಾದೇವಿ ಹಾಗೂ ಆಶಾ ಕಾರ್ಯಕರ್ತೆಯರು ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts