More

    ಶುದ್ಧ ಕುಡಿಯುವ ನೀರಿನ ಘಟಕ ಬಂದ್

    ಮುಂಡಗೋಡ: ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಕೆಳಗಡೆಯಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ವಾರ ಗತಿಸಿದರು ದುರಸ್ತಿ ಮಾಡದೇ ಇರುವುದರಿಂದ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

    ಪಟ್ಟಣದ ನಾಲ್ಕು ಭಾಗಗಳಲ್ಲಿ ಪಟ್ಟಣ ಪಂಚಾಯಿತಿಯರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಿುಸಿದ್ದಾರೆ. ಎಲ್ಲ ಘಟಕಗಳಿಂದಲು ಪಟ್ಟಣದ ಜನತೆ ಬೆಳಗ್ಗೆಯಿಂದ ಸಂಜೆಯ ವರೆಗೂ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಾರೆ.

    ಆದರೆ ಸಿಂಡಿಕೆಟ್ ಬ್ಯಾಂಕ್ ಕೆಳಗಡೆಯಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ವಾರ ಗತಿಸಿದೆ ಆದರೂ ಸಹ ದುರಸ್ತಿ ಮಾಡಿಸಿಲ್ಲ ಇದರಿಂದ ಈ ಭಾಗದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

    ಪಟ್ಟಣದಲ್ಲಿನ ನಾಲ್ಕು ಕುಡಿಯುವ ನೀರಿನ ಘಟಕವನ್ನು ನಿರ್ವಹಣೆಗೆ ಖಾಸಗಿ ವ್ಯಕ್ತಿಗೆ ನೀಡಲಾಗಿದೆ ಆದರೆ ಈ ಘಟಕ ಹಾಳಾಗಿ ವಾರವಾದರೂ ದುರಸ್ಥಿ ಪಡಿಸಿಲ್ಲ ಈ ಕುರಿತು ಪಟ್ಟಣ ಪಂಚಾಯಿತಿಯವರಿಗೆ ತಿಳಿಸಿದರು ಸಹ ಯಾವೂದೆ ಪ್ರಯೋಜನವಾಗಿಲ್ಲ.

    ಈ ಹಿಂದೆಯೂ ಸಹ ಈ ನೀರಿನ ಘಟಕವು ಹಾಳಾಗಿತ್ತು ರೀಪೆರಿ ಮಾಡಿ ಕೆಲವೆ ತಿಂಗಳಲ್ಲಿ ಮತ್ತೆ ಹಾಳಾಗಿದ್ದು ಪಟ್ಟಣ ಪಂಚಾಯಿತಿಯವರು ಕೂಡಲೆ ಈ ಶುದ್ಧ ನೀರಿನ ಘಟಕವನ್ನು ಗುತ್ತಿಗೆದಾರರಿಂದ ದುರಸ್ತಿ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಮಾಡಿ ಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹಿಸಿದ್ದಾರೆ.

    ಸಿಂಡಿಕೆಟ್ ಬ್ಯಾಂಕ್ ಕೆಳಗಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ವಾರ ಗತಿಸಿದೆ ಇದರಿಂದ ಬೇರಡೆ ಹೋಗಿ ನೀರು ತರಲು ತೊಂದರೆಯಾ ಗುತ್ತಿದ್ದು ಕೂಡಲೆ ದುರಸ್ತಿ ಪಡಿಸಬೇಕು.

    | ಪ್ರಕಾಶ ಬಡಗಿ ಸ್ಥಳಿಯ

    ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಗೆ ಖಾಸಗಿ ವ್ಯಕ್ತಿಗೆ ಗುತ್ತಿಗೆ ನೀಡಿದ್ದು ಅದನ್ನು ದುರಸ್ತಿ ಪಡಿಸುವಂತೆ ಗುತ್ತಿಗೆದಾರನಿಗೆ ತಿಳಿಸಿದ್ದೇವೆ. ಒಂದೆರಡು ದಿನದಲ್ಲಿ ಸರಿ ಪಡಿಸಲಾಗುವುದು.

    | ಚಂದ್ರಶೇಖರ ಬಿ. ಮುಖ್ಯಾಧಿಕಾರಿ, ಪಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts