More

    ಕರ್ನಾಟಕ ನಿಧಿ ಹಂಚಿಕೆ ಕುರಿತು ‘ನಾನೇನೂ ಮಾಡಲು ಸಾಧ್ಯವಿಲ್ಲ: ‘ಕೈ’ ಚೆಲ್ಲಿದ್ದೇಕೆ ನಿರ್ಮಲಾ ಸೀತಾರಾಮನ್?

    ನವದೆಹಲಿ: ಬಜೆಟ್ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ಕರ್ನಾಟಕಕ್ಕೆ ಹಣ ಹಂಚಿಕೆಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು.

    ಇದನ್ನೂ ಓದಿ: ‘ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ನಿಮಗಿಲ್ಲ’: ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಬಿಜೆಪಿಯೇತರ ರಾಜ್ಯಗಳಿಗೆ ಸಲ್ಲಬೇಕಾದ ನ್ಯಾಯಸಮ್ಮತವಾದ ತೆರಿಗೆ ಮತ್ತು ಜಿಎಸ್‌ಟಿ ಬಾಕಿಯನ್ನು ಕೇಂದ್ರವು ತಡೆಹಿಡಿಯುತ್ತಿದೆ ಎಂದು ಚೌಧರಿ ಆರೋಪಿಸಿದರು, ನಿರ್ದಿಷ್ಟವಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕವನ್ನು ಗುರಿಯಾಗಿಸಿಕೊಂಡಿದ್ದೀರಿ. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ವಿರುದ್ಧ ಪಕ್ಷಪಾತದ ಧೋರಣೆ ಮಾಡುತ್ತಿದ್ದೀರಿ ಎಂದು ಟೀಕಿಸಿದರು.

    ಚೌಧರಿ ಆರೋಪಗಳನ್ನು ನಿರ್ಮಲಾ ಸೀತಾರಾಮನ್ ದೃಢವಾಗಿ ತಳ್ಳಿಹಾಕಿದರು, ಪಟ್ಟಭದ್ರ ಹಿತಾಸಕ್ತಿಗಳು ನಡೆಸುವ ಪಿತೂರಿ ಹಾಗೂ “ರಾಜಕೀಯವಾಗಿ ದಿವಾಳಿಯಾದವರು ತಾರತಮ್ಯದ ಆರೋಪಗಳನ್ನು ಮಾಡುತ್ತಾರೆ” ಎಂದು ತಿರುಗೇಟು ನೀಡಿದರು.

    ರಾಜ್ಯಗಳಿಗೆ ನಿಧಿಯ ವಿತರಣೆಯು ಹಣಕಾಸು ಆಯೋಗದ ಶಿಫಾರಸುಗಳನ್ನು ಆಧರಿಸಿದೆ. ಯಾವುದೇ ಪಕ್ಷಪಾತ ಅಥವಾ ರಾಜಕೀಯ ಪ್ರಭಾವವಿಲ್ಲದೆ ಕಾರ್ಯಗತಗೊಳಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

    ನಾನು ಹಣಕಾಸು ಸಚಿವೆಯಾಗಿ, ವೈಯಕ್ತಿಕ ಆದ್ಯತೆ ಅಥವಾ ಪಕ್ಷದ ರಾಜಕೀಯದ ಹಿತಾಸಕ್ತಿ ಆಧಾರದ ಮೇಲೆ ಹಣ ಹಂಚಿಕೆಗಳನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು,

    ಹಣಕಾಸು ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ನಿಯಮ ಮತ್ತು ನ್ಯಾಯಸಮ್ಮತತೆಯನ್ನು ಪಾಲಿಸಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು.

    IND vs ENG: ಇಂಗ್ಲೆಂಡ್ ವಿರುದ್ಧ ಜಯ..ಭಾರತ ಡಬ್ಲ್ಯೂಟಿಸಿ ಟೇಬಲ್‌ನಲ್ಲಿ ಯಾವ ಸ್ಥಾನಕ್ಕೆ ಜಿಗಿದಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts