More

    ಪರಿಹಾರಕ್ಕೆ ಆಗ್ರಹಿಸಿ ಪೌರ ಕಾರ್ವಿುಕರ ಪ್ರತಿಭಟನೆ

    ಹುಬ್ಬಳ್ಳಿ: ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ವಾಹನದ ಹೈಡ್ರಾಲಿಕ್ ಲಿಫ್ಟ್ ಅಡಿಯಲ್ಲಿ ಸಿಲುಕಿ ಮೃತಪಟ್ಟ ಚಾಲಕ ವಸಂತ ಇಳಕಲ್ಲ ಅವರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ವಿುಕರ ಮತ್ತು ನೌಕರರ ಸಂಘದಿಂದ ಪಾಲಿಕೆ ಆವರಣದಲ್ಲಿ ಭಾನುವಾರ ಪ್ರತಿಭಟಿಸಲಾಯಿತು.

    ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಸರ್ಕಾರದ ಆದೇಶದಂತೆ ಪಾಲಿಕೆಯು 194 ವಾಹನ ಚಾಲಕರಿಗೆ ಅಪಘಾತ ವಿಮೆ ಮಾಡಿಸಿಲ್ಲ. ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಾಹನಗಳ ದುರಸ್ತಿಯನ್ನು ಬಡ ಪೌರ ಕಾರ್ವಿುಕರ ಮೇಲೆ ಹೇರದೇ ನುರಿತ ತಂತ್ರಜ್ಞರಿಂದ ನಿರ್ವಹಿಸಬೇಕು. ಪೌರ ಕಾರ್ವಿುಕರು ಸೇರಿದಂತೆ ಇತರೆ ಸ್ವಚ್ಛತಾ ಸಿಬ್ಬಂದಿ ಇಂತಹ ದುರ್ಘಟನೆಯಲ್ಲಿ ಮೃತಪಟ್ಟರೆ ಪಾಲಿಕೆಯಿಂದ ಅವರ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ಮತ್ತು ಉದ್ಯೋಗ ಒದಗಿಸಲು ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಬೇಕು ಎಂದು ಆಗ್ರಹಿಸಿದರು.

    ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಗಾಳೆಪ್ಪ ದ್ವಾಸಲಕೇರಿ, ಸತೀಶ ಗಬ್ಬೂರ, ಚಂದ್ರು ಸಿರಗುಂಪಿ, ವಸಂತ ರೋಣ, ಮಾರುತಿ ದೊಡ್ಡಮನಿ, ಗಂಗಮ್ಮ ಸಿದ್ರಾಮಪೂರ, ಅನಿತಾ ಈನಗೊಂಡ ಸೇರಿದಂತೆ ನೂರಾರು ಪೌರ ಕಾರ್ವಿುಕರು, ಕಸದ ವಾಹನ ಚಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts