More

  ಪೌರತ್ವ ತಿದ್ದುಪಡಿ ಕಾಯ್ದೆ ಯಾರೊಬ್ಬರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ, ಪೌರತ್ವವನ್ನು ನೀಡುತ್ತದೆ: ಪ್ರಧಾನಿ ಮೋದಿ

  ಕೋಲ್ಕತ: ಪೌರತ್ವ ತಿದ್ದುಪಡಿ ಕಾಯ್ದೆಯು ಯಾರೊಬ್ಬರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಬದಲಾಗಿ ಪೌರತ್ವವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

  ಭಾನುವಾರ ಬೆಳಗ್ಗೆ ಹೌರಾದಲ್ಲಿರುವ ರಾಮಕೃಷ್ಣ ಮಿಷನ್​ ಮುಖ್ಯಕಚೇರಿ ಬೇಲೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ ಸ್ವಾಮಿ ಆತ್ಮಸ್ಥನಂದಾಜಿ ಅವರ ಆಶೀರ್ವಾದ ಪಡೆದಿದ್ದೆ. ಆದರೆ, ಅವರಿಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಆದರೆ, ಅವರ ಸೇವೆ, ನಡೆದು ಬಂದ ಹಾದಿ ನಮ್ಮನ್ನು ಯಾವಾಗಲು ರಾಮಕೃಷ್ಣ ಮಿಷನ್​ ಮೂಲಕ ಮಾರ್ಗದರ್ಶಿಸುತ್ತದೆ ಎಂದು ಹೇಳಿದರು.

  ನಾವು ಯಾವಾಗಲೂ ಖಂಡಿತವಾಗಿ ಸ್ವಾಮಿ ವಿವೇಕಾನಂದ ಅವರನ್ನು ಸ್ಮರಿಸಬೇಕು. ನನಗೆ ನೂರು ಉತ್ಸಾಹಿ ಯವಕರನ್ನು ಕೊಡಿ ನಾನು ಖಂಡಿತವಾಗಿ ಭಾರತದ ಸುಧಾರಣೆ ಮಾಡುತ್ತೇನೆಂಬ ಅವರ ಅಪ್ರತಿಮ ಹೇಳಿಕೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡುವಾಗ ನಮ್ಮ ಶಕ್ತಿ ಮತ್ತು ಒಳ್ಳೆಯ ಮನೋಭಾವ ಕೆಲಸದಲ್ಲಿ ಬದಲಾವಣೆ ಕಾಣಲು ತುಂಬಾ ಅವಶ್ಯಕ ಎಂದು ಪ್ರಧಾನಿ ತಿಳಿಸಿದರು.

  ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿದ ಅವರು ಮತ್ತೊಮ್ಮೆ ಹೇಳುತ್ತೇನೆ ಸಿಎಎ ಯಾರೊಬ್ಬರ ಪೌರತ್ವವನ್ನು ರದ್ದು ಮಾಡುವುದಿಲ್ಲ. ಬದಲಾಗಿ ಇದು ಪೌರತ್ವವನ್ನು ನೀಡುತ್ತದೆ. ಸ್ವಾಂತಂತ್ರ್ಯದ ನಂತರ ಮಹಾತ್ಮ ಗಾಂಧೀಜಿ ಮತ್ತು ಇತರೆ ಮಹಾನ್​ ನಾಯಕರು ಪಾಕಿಸ್ತಾನದಲ್ಲಿ ಧಾರ್ಮಿಕವಾಗಿ ಹಿಂಸೆಗೊಳಗಾವರಿಗೆ ಪೌರತ್ವ ನೀಡುವುದನ್ನು ಅಂದೇ ನಂಬಿದ್ದರು ಎಂದು ಹೇಳಿದರು.

  ಕಾಯ್ದೆಯನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಆದರೆ, ಇದರಲ್ಲಿ ರಾಜಕೀಯ ಆಟವನ್ನು ಆಡುತ್ತಿರುವವರು ಅರ್ಥ ಮಾಡಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದ್ದಾರೆ. ಕಾಯ್ದೆ ಬಗ್ಗೆ ಎಲ್ಲೆಡೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ವಿರೋಧಿಗಳಿಗೆ ಟಾಂಗ್​ ನೀಡಿದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts