More

    ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ

    ಚಿಕ್ಕೋಡಿ: ಕರೊನಾ ಹರಡುವುದನ್ನು ತಡೆಗಟ್ಟುವಲ್ಲಿ ಪೌರ ಕಾರ್ಮಿಕರು ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಡಾ. ಎಸ್.ಆರ್. ರೋಗಿ ಶ್ಲಾಘಿಸಿದರು.

    ಚಿಕ್ಕೋಡಿ ಪುರಸಭೆಯಲ್ಲಿ ಪುರಸಭೆ ಹಾಗೂ ಪೌರಕಾರ್ಮಿಕ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪೌರ ಕಾರ್ಮಿಕರಿಗೆ ಏನಾದರೂ ಸೌಲಭ್ಯ ಅಥವಾ ವೈದ್ಯಕೀಯ ಉಪಚಾರ ಬೇಕಾದಲ್ಲಿ ನನಗೆ ಸಂಪರ್ಕಿಸಬಹುದು ಎಂದರು.

    ಕರೊನಾ ವೈರಸ್ ಸೇವೆಯಲ್ಲಿ ಅತಿ ಉತ್ಸಾಹದಿಂದ ಕೆಲಸ ನಿರ್ವಹಿಸಿದ ಎಲ್ಲ ಸಿಬ್ಬಂದಿಯನ್ನು ಪುರಸಭೆಯಿಂದ ಸತ್ಕರಿಸಲಾಯಿತು. ಸರ್ಕಾರದ ಆದೇಶದಂತೆ ಕಾಯಂ ಪೌರಕಾರ್ಮಿಕರಿಗೆ ತಲಾ 3,500 ರೂ. ಸಂದಾಯ ಮಾಡಿದ ಆದೇಶಗಳನ್ನು ನೀಡಲಾಯಿತು.

    ಪರಿಸರ ಇಂಜಿನಿಯರ್ ಪಿ.ಸಿ. ವಿನಾಯಕ ಪೌರಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿಗಳೊಂದಿಗೆ ಕೆಲಸ ನಿರ್ವಹಿಸಲು ಹಾಗೂ ಸರ್ಕಾರದ ಮಟ್ಟದಲ್ಲಿ ಸಿಗಬೇಕಾದ ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಇದೇ ವೇಳೆ ಮುಖ್ಯಾಧಿಕಾರಿ ಡಾ. ಎಸ್.ಆರ್. ರೋಗಿ ಅವರನ್ನು ಸನ್ಮಾನಿಸಲಾಯಿತು. ಎಂ.ಎ. ಮಹಾಜನ, ಆರ್.ಎಂ. ಚಿನಗುಂಡಿ, ಎನ್.ವಿ. ಹಿರೇಮಠ, ಎಸ್.ಇ. ಕಾಂಬಳೆ, ಟಿ.ಕೆ. ಜಮಖಂಡಿ, ಪ್ರಕಾಶ ಹೊನಮಾನೆ ಇದ್ದರು. ಕಿರಣ ಬಳ್ಳುರ್ಗಿ, ಸಂದೀಪ ಮಕವಾನ, ಶ್ರೀನಿವಾಸ ಮಿರಿಯನ್, ಅಶೋಕ ಝಳಕೆ, ಎಸ್.ಐ. ಖೋತ, ಎ.ವಿ. ಕಾಳೆ, ಪೌರ ನೌಕರರ ಉಪಾಧ್ಯಕ್ಷ ಆರ್.ಎ. ಸೋಗಿ, ಜಗದೀಶ ಪಾಟೀಲ, ಸುನೀಲ ಕಾಂಬಳೆ, ನೀರು ಸರಬರಾಜು, ಪೌರಕಾರ್ಮಿಕರು ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts