More

    ಗೊಂದಲ ಸೃಷ್ಟಿಸಿದ ಸುತ್ತೋಲೆ; ಪಿಡಿಒ ಪ್ರಭಾರ ಅಸ್ತವ್ಯಸ್ತ

    ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವ ವಿಚಾರದಲ್ಲಿ ಹೊರಡಿಸಿರುವ ಸುತ್ತೋಲೆ ಗೊಂದಲ ಸೃಷ್ಟಿಸಿದೆ.

    ಡಿ.23, 2014ರ ಸುತ್ತೋಲೆಯನ್ನು ಲಗತ್ತಿಸಿ ಅದರಂತೆ ಗ್ರೇಡ್ 2 ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಹುದ್ದೆ ಖಾಲಿ ಇದ್ದಲ್ಲಿ ಅಂತಹ ಹುದ್ದೆಗೆ ಅದೇ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್ 2 ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನೇ ಪಿಡಿಒ ಹುದ್ದೆಗೆ ಪ್ರಭಾರದಲ್ಲಿರಿಸತಕ್ಕದ್ದು. ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಹುದ್ದೆ ಹಾಗೂ ಗ್ರಾಪಂ ಕಾರ್ಯದರ್ಶಿ ಗ್ರೇಡ್ 2 ಎರಡೂ ಹುದ್ದೆ ಖಾಲಿ ಇದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಪಿಡಿಒ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರುವಂತೆ ತಿಳಿಸಲಾಗಿದೆ.

    ಆದರೆ ನ.23, 2018 ರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಹುದ್ದೆ ನಿವೃತ್ತಿ, ಅಮಾನತು, ಇನ್ನಿತರೆ ಕಾರಣಗಳಿಗೆ ತೆರವಾದಲ್ಲಿ ಆ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್ 1 ಕಾರ್ಯದರ್ಶಿ ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅವರಿಗೆ ಪ್ರಭಾರ ವಹಿಸಬೇಕು. ಪೂರ್ಣಕಾಲಿಕ ಗ್ರೇಡ್ 1 ಕಾರ್ಯದರ್ಶಿ ಇಲ್ಲದಿದ್ದಲ್ಲಿ ನೆರೆಯ ಗ್ರಾಮ ಪಂಚಾಯಿತಿಯ ಪಿಡಿಒಗೆ ಹೆಚ್ಚುವರಿ ಪ್ರಭಾರ ವಹಿಸಬೇಕು. ಗ್ರೇಡ್ 2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಪಿಡಿಒ ಹುದ್ದೆ ಪ್ರಭಾರ ವಹಿಸಬಾರದು ಎಂದು ಸ್ಪಷ್ಟಪಡಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಹಾಗಾಗಿ ಹಿಂದಿನ ಸುತ್ತೋಲೆ ಹಾಗೂ ಈಗಿನ ಸುತ್ತೋಲೆಗಳು ವಿರೋಧಾತ್ಮಕವಾಗಿದ್ದು, ಪಿಡಿಒಗಳ ಪ್ರಭಾರ ನೇಮಕ ಗೊಂದಲ ಉಂಟು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts