'ಮರ್ದಿನಿ'ಗೆ ಕುಂಬಳಕಾಯಿ ... ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆ

Mardini - Final
Published on

ಬೆಂಗಳೂರು: ಈ ಹಿಂದೆ ಪ್ರಥಮ್​ ಅಭಿನಯದ 'ದೇವರಂಥ ಮನುಷ್ಯ' ಚಿತ್ರವನ್ನು ನಿರ್ದೇಶಿಸಿದ್ದ ಕಿರಣ್​ ಕುಮಾರ್​ ಈಗ ಸದ್ದಿಲ್ಲದೆ 'ಮರ್ದಿನಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಇತ್ತೀಚೆಗೆ ಆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಕುಂಬಳಕಾಯಿ ಒಡೆದಿರುವ ಚಿತ್ರತಂಡವು, ಚಿತ್ರವನ್ನು ವರ್ಷದ ಕೊನೆಗೆ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ಅಂಕಿತ್ ಫಿಲಂಸ್ ಬ್ಯಾನರ್ ನಡಿ ಶ್ರೀಮತಿ ಭಾರತಿ ಜಗ್ಗಿ ನಿರ್ಮಿಸುತ್ತಿರುವ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿದೆ ಬೆಂಗಳೂರಿಗೆ ವಾಪಸ್ಸಾಗಿದೆ. ಈ ಚಿತ್ರದ ಮೂಲಕ ರಿತನ್ಯಾ ಮತ್ತು ಅಕ್ಷಯ್​, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಅಕ್ಷಯ್​ ಮತ್ತು ರಿತನ್ಯಾ ಅಲ್ಲದೆ, 'ಮಜಾಭಾರತ'ದ ಸುಶ್ಮಿತಾ, ಮನಮೋಹನ್ ರೈ, ಗವಿ ಸಿದ್ದಯ್ಯ, ಅಶೋಕ್, ತೃಪ್ತಿ, ಇಂಚರ ಹಾಗೂ ಇನ್ನಿತರ ನಟ-ನಟಿಯರು ಚಿತ್ರದ ಕೆಲವು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಕ್ಷಯ್ ಮತ್ತು ಗಜೇಂದ್ರ ಜತೆಯಾಗಿ ಬರೆದಿದ್ದಾರೆ. ಹಿತನ್ ಹಾಸನ್ ಅವರ ಸಂಗೀತ ಮತ್ತು ಎನ್.ಎಮ್.ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ,

'ಮರ್ದಿನಿ' ಚಿತ್ರದ ವಿಶೇಷ ಪಾತ್ರದಲ್ಲಿ ಸೈಬೀರಿಯನ್ ಹಸ್ಕಿ ತಳಿಯ ನಾಯಿ ಅಭಿನಯಿಸಿದ್ದು, ಅದೇ ಚಿತ್ರದ ಹೈಲೈಟ್​ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net