ಗುರುತು ಸಿಗದಷ್ಟು ಬದಲಾದ ಲಂಕೇಶ್ ಪತ್ರಿಕೆ ನಟಿ ವಸುಂಧರಾ ದಾಸ್: ಇತ್ತೀಚಿನ ಫೋಟೋ ವೈರಲ್...! Vasundhara Das

ಕೆಲ ನಟ-ನಟಿಯರು ಒಂದು ಕಾಲದಲ್ಲಿ ಬಹಳ ಸದ್ದು ಮಾಡಿ ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರದಿಂದ ಕಣ್ಮರೆಯಾಗಿಬಿಡುತ್ತಾರೆ. ಆದರೂ ಅವರ ನಟನೆಯ ಸಿನಿಮಾಗಳು ಮತ್ತು ಹಾಡುಗಳು ಸದಾ ಸಿನಿರಸಿಕರನ್ನು ರಂಜಿಸುತ್ತಲೇ ಇರುತ್ತದೆ. ಇಂತಹ ಸಿನಿಮಾಗಳಲ್ಲಿ ಲಂಕೇಶ್​ ಪತ್ರಿಕೆ ಕೂಡ ಒಂದು. ನಟ ದರ್ಶನ್​ ಅಭಿನಯದ ಈ ಸಿನಿಮಾವನ್ನು ಇಂದ್ರಜಿತ್​ ಲಂಕೇಶ್​ ನಿರ್ದೇಶಿಸಿದರು.
Vasundhara Das
ಗುರುತು ಸಿಗದಷ್ಟು ಬದಲಾದ ಲಂಕೇಶ್ ಪತ್ರಿಕೆ ನಟಿ ವಸುಂಧರಾ ದಾಸ್: ಇತ್ತೀಚಿನ ಫೋಟೋ ವೈರಲ್...!
Published on: 

Vasundhara Das : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ಕೆಲ ನಟ-ನಟಿಯರು ಒಂದು ಕಾಲದಲ್ಲಿ ಬಹಳ ಸದ್ದು ಮಾಡಿ ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರದಿಂದ ಕಣ್ಮರೆಯಾಗಿಬಿಡುತ್ತಾರೆ. ಆದರೂ ಅವರ ನಟನೆಯ ಸಿನಿಮಾಗಳು ಮತ್ತು ಹಾಡುಗಳು ಸದಾ ಸಿನಿರಸಿಕರನ್ನು ರಂಜಿಸುತ್ತಲೇ ಇರುತ್ತದೆ. ಇಂತಹ ಸಿನಿಮಾಗಳಲ್ಲಿ ಲಂಕೇಶ್​ ಪತ್ರಿಕೆ ಕೂಡ ಒಂದು. ನಟ ದರ್ಶನ್​ ಅಭಿನಯದ ಈ ಸಿನಿಮಾವನ್ನು ಇಂದ್ರಜಿತ್​ ಲಂಕೇಶ್​ ನಿರ್ದೇಶಿಸಿದರು.

ಈ ಸಿನಿಮಾದ "ಎಂದೋ ಕಂಡ ಕನಸು ಅದು ನಿನ್ನ ಮನಸ್ಸು" ಹಾಡು ಇಂದಿಗೂ ಸಂಗೀತ ಪ್ರಿಯರ ಫೇವರಿಟ್​ ಆಗಿದೆ. ಈ ಚಿತ್ರದಲ್ಲಿ ದರ್ಶನ್​ಗೆ ಜೋಡಿಯಾಗಿದ್ದ ನಟಿ ವಸುಂಧರಾ ದಾಸ್​ ಕನ್ನಡದಲ್ಲಿ ನಟಿಸಿದ್ದು ಇದೊಂದೆ ಸಿನಿಮಾ. ಆದರೆ, ಈ ಒಂದೇ ಒಂದು ಹಾಡಿನಿಂದ ಎಂದೆಂದಿಗೂ ಕನ್ನಡಿಗರಲ್ಲಿ ನೆನಪಾಗಿರುತ್ತಾರೆ.

Also Read
ನನಗೆ ಮದುವೆಯಾಗುವ ಆಸೆಯಿದೆ ಆದರೆ... ವೈರಲ್​ ಆಯ್ತು ಸೌತ್​ ಬ್ಯೂಟಿ ನಿತ್ಯಾ ಮೆನನ್ ಹೇಳಿಕೆ...! Nithya Menen
Vasundhara Das

2000ರಲ್ಲಿ ಕಮಲ್ ಹಾಸನ್ ನಟನೆಯ 'ಹೇ ರಾಮ್' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಅಜಿತ್ ಅಭಿನಯದ ಸೂಪರ್ ಹಿಟ್ 'ಸಿಟಿಜನ್' ಹಾಗೂ ಕನ್ನಡದ 'ಲಂಕೇಶ್ ಪತ್ರಿಕೆ' ಸಿನಿಮಾಗಳ ಮೂಲಕ ಮನೆಮಾತಾಗಿದ್ದ ನಟಿ ವಸುಂಧರಾ ದಾಸ್ ಅವರ ಇತ್ತೀಚಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಬೆಂಗಳೂರು ಮೂಲದವರಾದ ಇವರು ಆರನೇ ವಯಸ್ಸಿನಿಂದಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿದ್ದು, ಕಾಲೇಜು ಕಾರ್ಯಕ್ರಮವೊಂದರಲ್ಲಿ ಹಾಡುವ ಮೂಲಕ ಸಿನಿಮಾ ಹಿನ್ನೆಲೆ ಗಾಯಕಿಯಾಗಿ ಅವಕಾಶ ಪಡೆದರು. 'ಮುದಲ್ವನ್' ಚಿತ್ರದ 'ಶಕಲಕ ಬೇಬಿ' ಮತ್ತು ವಿಜಯ್ ಅಭಿನಯದ 'ಖುಷಿ' ಚಿತ್ರದ 'ಕಟ್ಟಿಪುಡಿ ಕಟ್ಟಿಪುಡಿ'ಯಂತಹ ಸೂಪರ್ ಹಿಟ್ ಹಾಡುಗಳನ್ನು ಹಾಡಿ ಜನಪ್ರಿಯರಾದ ಇವರು, ತಮಿಳು ಮಾತ್ರವಲ್ಲದೆ ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.

2007ರ ನಂತರ ಸಿನಿಮಾ ನಟನೆಗೆ ವಿದಾಯ ಹೇಳಿದ ವಸುಂಧರಾ ದಾಸ್, 2012ರಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಹಾಗೂ ಡ್ರಮ್ಮರ್ ರಾಬರ್ಟೊ ನರೈನ್ ಅವರನ್ನು ವಿವಾಹವಾದರು. ಮದುವೆಯ ನಂತರ ಸಂಪೂರ್ಣವಾಗಿ ಸಂಗೀತ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಅವರು, ತಮ್ಮದೇ ಆದ ಮ್ಯೂಸಿಕ್ ಬ್ಯಾಂಡ್ ಮೂಲಕ ದೇಶ-ವಿದೇಶಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಅವರ ಇತ್ತೀಚಿನ ಫೋಟೋದಲ್ಲಿ ವಸುಂಧರಾ ದಾಸ್ ಅವರು ಮೊದಲಿನಂತೆ ಇಲ್ಲದೆ ಸಂಪೂರ್ಣವಾಗಿ ಬದಲಾಗಿದ್ದು, ಅವರ ಈ ಹೊಸ ರೂಪವನ್ನು ಕಂಡ ಅಭಿಮಾನಿಗಳು ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Also Read
ಡಿವೋರ್ಸ್​​ ಬಳಿಕ ಅತ್ತ ಚಾಹಲ್ ಬಿಜೆಪಿ ಸೇರಿದ್ರೆ ಇತ್ತ ಮಾಜಿ ಪತ್ನಿ ಧನಶ್ರೀ ವರ್ಮಾರಿಂದ ಹೊಸ ಇನ್ನಿಂಗ್ಸ್​ ಶುರು! Dhanashree Verma
Vasundhara Das

ಮತ್ತೊಂದು ಫೋಟೋದಲ್ಲಿ ವಸುಂಧರಾ ಅವರು ತಮ್ಮ ಕುಟುಂಬದ ಜತೆಗಿದ್ದಾರೆ. ಅವರ ಪತಿ ಮತ್ತು ಮಗನೊಂದಿಗೆ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಎರಡೂ ಫೋಟೋಗಳಲ್ಲಿ ವಸುಂಧರಾ ಅವರು ಗುರುತಿಸಲಾಗದಷ್ಟು ದಪ್ಪವಾಗಿ ಕಾಣುತ್ತಾರೆ. ಸದ್ಯ ಈ ಫೋಟೋ ವೈರಲ್​ ಆಗುತ್ತಿದ್ದು, ಇವರೇನಾ ಲಂಕೇಶ್​ ಪತ್ರಿಕೆ ಹೀರೋಯಿನ್​ ಎಂದು ಕನ್ನಡಿಗರು ಹುಬ್ಬೇರಿಸಿದ್ದಾರೆ, (ಏಜೆನ್ಸೀಸ್​).