ಲಾರೆನ್ಸ್ ಆಫ್ ಪಂಜಾಬ್ ಬಿಡುಗಡೆಗೆ ಕೋರ್ಟ್ ತಡೆ: ಬಿಷ್ಣೋಯ್​ ಗ್ಯಾಂಗ್​ನಿಂದ ಮೂಸೆವಾಲಾ ತಂದೆಗೆ ಜೀವ ಬೆದರಿಕೆ! Lawrence Bishnoi

ಬಲ್ಕೌರ್​ ಸಿಂಗ್​ ಸೇರಿದಂತೆ ಹಲವರಿಗೆ ಬಿಷ್ಣೋಯ್​ ಗ್ಯಾಂಗ್​ನಿಂದ ಜೀವ ಬೆದರಿಕೆ
ಬಲ್ಕೌರ್​ ಸಿಂಗ್​ ಸೇರಿದಂತೆ ಹಲವರಿಗೆ ಬಿಷ್ಣೋಯ್​ ಗ್ಯಾಂಗ್​ನಿಂದ ಜೀವ ಬೆದರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಲಾರೆನ್ಸ್ ಆಫ್ ಪಂಜಾಬ್ ವೆಬ್ ಸರಣಿ ಬಿಡುಗಡೆಗೆ ನ್ಯಾಯಾಲಯ ತಡೆ
  • ಅವನೇನು ಸ್ವಾತಂತ್ರ ಹೋರಾಟಗಾರನೇ ಎಂದಿದ್ದ ಸಿಧು ಮೂಸೆವಾಲಾ ತಂದೆ
  • ಬಲ್ಕೌರ್​ ಸಿಂಗ್​ ಸೇರಿದಂತೆ ಹಲವರಿಗೆ ಬಿಷ್ಣೋಯ್​ ಗ್ಯಾಂಗ್​ನಿಂದ ಜೀವ ಬೆದರಿಕೆ
ಪಂಜಾಬ್​: ಸದ್ಯ ಭಾರತದ ಕುಖ್ಯಾತ ಗ್ಯಾಂಗ್​ಸ್ಟರ್​ ಪಟ್ಟದಲ್ಲಿ ಕುಳಿತಿರುವ ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ಜೀವನಾಧಾರಿತ ವೆಬ್​ ಸರಣಿ (ಲಾರೆನ್ಸ್​ ಆಫ್​ ಪಂಜಾಬ್​) ಯೊಂದು ತೆರೆಕಾಣಲು ಸಿದ್ಧವಾಗಿತ್ತು. ಆದರೆ ಈ ಕುರಿತು ಕಾಂಗ್ರೆಸ್​ ಶಾಸಕರು ಹಾಗೂ ಸಿಂಗರ್​ ಸಿಧು ಮೂಸೆವಾಲಾ ತಂದೆ ಬಲ್​ಕೌರ್​ ಸಿಂಗ್​ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆ ಈ ಸರಣಿಯ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಈಗ ಈ ತಡೆಯಾಜ್ಞೆಯಿಂದ ಕುಪಿತರಾಗಿರುವ ಬಿಷ್ಣೋಯ್​ ಗ್ಯಾಂಗ್​ ಸದಸ್ಯರು ಸಿಧು ಮೂಸೆವಾಲಾರ ತಂದೆಗೆ ಜೀವ ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದೆ.

ಈ ಸರಣಿ ಬಿಡುಗಡೆಯಾಗಲೇ ಬೇಕು

ಈ ವೆಬ್​ ಸರಣಿ ಬಿಡುಗಡೆಗೆ ನೀಡಿರುವ ತಡೆಯನ್ನು ತೆಗೆಯಬೇಕು, ಈ ಸರಣಿ ಆದಷ್ಟು ಬೇಗ ಬಿಡುಗಡೆಯಾಗಬೇಕು. ಇಲ್ಲದಿದ್ದರೆ, ಪರಿಸ್ಥಿತಿ ಬೇರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜೀ 5 ನಲ್ಲಿ ಈ ಸರಣಿಯ ಟ್ರೇಲರ್​ ಬಿಡುಗಡೆಯಾಗಿದ್ದು, ಏಪ್ರಿಲ್​ 27 ರಂದು ಸರಣಿ ಬಿಡುಗಡೆಯಾಗಬೇಕಿತ್ತು. ಆದರೆ ದೆಹಲಿ ಮುಖ್ಯ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಕಾರಣ ಮುಂದಿನ ಬಿಡುಗಡೆ ದಿನಾಂಕ ಇನ್ನೂ ತಿಳಿದು ಬಂದಿಲ್ಲ.
ಈ ವೆಬ್​ ಸರಣಿ ಬಿಡುಗಡೆ ತಡೆಗೆ ಕಾರಣರಾದ, ಸಿಧು ಮೂಸೆವಾಲಾ ತಂದೆ ಬಲ್​ಕೌರ್​ ಸಿಂಗ್​, ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ಅಮರಿಂದರ್​ ಸಿಂಗ್​ ರಾಜಾ ವಾರಿಂಗ್​, ಸುಖರಿಂದರ್​ ಸಿಂಗ್​ ರಂಧಾವಾ, ಅಕಾಲಿದಳ ನಾಯಕ ಬಿಕ್ರಮ್​ ಸಿಂಗ್​ ಮಂಜಿತ್ಯಾ, ಪಂಜಾಬ್​ ಡಿಜಿಪಿ ಗೌರವ್​ ಯಾದವ್​ ಮತ್ತು ಅಡ್ವೋಕೆಟ್​ ಜನರಲ್​ ಮಣಿಂದರ್​ ಸಿಂಗ್​ ಬೇಡಿ ಇವರುಗಳಿಗೆ ಬೆದರಿಕೆ ಹಾಕಿದ್ದಾರೆ.

ಅವನೇನು ಸ್ವಾತಂತ್ರ ಹೋರಾಟಗಾರನೇ?

ತಮ್ಮ ಮಗನ ಹತ್ಯೆಯ ಹೊಣೆ ಹೊತ್ತಿಕೊಂಡಿದ್ದ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಗುಡುಗಿದ ಸಿಧು ಮೂಸೆವಾಲಾ ತಂದೆ, ಅವನೇನು ಸ್ವಾತಂತ್ರ್ಯ ಹೋರಾಟಗಾರನೇ? ಅವನೊಬ್ಬ ಕೊಲೆಗಾರ, ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನ ಬಗ್ಗೆ ಏಕೆ ಸಿನಿಮಾ ಮಾಡಬೇಕು.
ನನ್ನ ಮಗನನ್ನು ಕೊಲ್ಲಿಸಿದವನು ಅವನು, ನನ್ನ ಮಗನ ಸಾವಿಗೆ ಇನ್ನೂ ನ್ಯಾಯ ದೊರೆತಿಲ್ಲ. ಇವನ ಬಗ್ಗೆ ಸಿನಿಮಾ, ವೆಬ್​ ಸರಣಿಗಳನ್ನು ಮಾಡುವುದಾದರೂ ಏಕೆ? ಇದರಿಂದ ಯುವಕರಿಗೆ ಯಾವ ರೀತಿಯ ಸಂದೇಶ ರವಾನೆ ಆಗುತ್ತದೆ ಎಂದು ಬಲ್​ಕೌರ್​ ಸಿಂಗ್​ ಆಕ್ರೋಶ ಹೊರಹಾಕಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net