More

    ಪಿಎಸ್​ಐ ಪರೀಕ್ಷೆಯಲ್ಲಿ ಬರೆದಿದ್ದು 21 ಪ್ರಶ್ನೆಗೆ ಉತ್ತರ ಓಎಂಆರ್ ಶೀಟ್​ನಲ್ಲಿ ತೋರಿಸಿದ್ದೆಷ್ಟು?

    ಕಲಬುರಗಿ: ಪಿಎಸ್​ಐ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಿಐಡಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ವಿರೇಶ್ ಎಂಬ ಅಭ್ಯರ್ಥಿಯ ಒಎಂಆರ್​ ಶೀಟ್​ನಿಂದ ಈ ಅಕ್ರಮ ಬಯಲಾಗಿದೆ.

    ಪರೀಕ್ಷಾ ಕೇಂದ್ರದಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದ ಅಭ್ಯರ್ಥಿ ವಿರೇಶ್​​ ಮೌಲ್ಯಮಾಪನ ಕೊಠಡಿಯ ಓಎಂಆರ್​ ಶೀಟ್​ನಲ್ಲಿ ನೂರಕ್ಕೆ ನೂರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ತೋರಿಸಲಾಗಿದೆ.ಪರೀಕ್ಷೆಯಲ್ಲಿ ವೀರೇಶ್ 7ನೇ ರ್ಯಾಂಕ್​ ಕೂಡ ಪಡೆದಿದ್ದಾರೆ ಎನ್ನಲಾಗಿತ್ತು.ಆದರೆ ಈಗ ಅಕ್ರಮ ಬಯಲಾಗಿದ್ದು, ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಒಟ್ಟು 545 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು.

    ಅಬ್ಬಬ್ಬಾ ಕೆ.ಜಿ. ನಿಂಬೆಹಣ್ಣು 250 ರೂ..!

    ಮತ್ತೆ ರಾಜಕೀಯಕ್ಕೆ: ಜನಾರ್ಧನ ರೆಡ್ಡಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts