More

    ಭರ್ತಿ ಅಂಚಿಗೆ ಚುಳಕಿನಾಲಾ ಜಲಾಶಯ

    ಬಸವಕಲ್ಯಾಣ: ಹುಲಸೂರು ತಾಲೂಕಿನ ಚುಳಕಿನಾಲಾ ಜಲಾಶಯದ ಪ್ರದೇಶದಲ್ಲಿ ಮಳೆಯಿಂದ ಒಳಹರಿವು ಹೆಚ್ಚುತ್ತಿದ್ದು, ಭರ್ತಿ ಅಂಚಿನಲ್ಲಿದೆ. ಒಳಹರಿವು ನೋಡಿ ಹೆಚ್ಚುವರಿ ನೀರು ನಾಲೆಗೆ ಹರಿಸುವುದಾಗಿ ಎಇಇ ರಾಮಶೆಟ್ಟಿ ಜಾಧವ್ ತಿಳಿಸಿದ್ದಾರೆ. ಜಲಾಶಯದ ಗರಿಷ್ಠ ಮಟ್ಟ ೫೯೨ ಮೀಟರ್ ಇದ್ದು, ಈಗಾಗಲೇ ೫೯೧.೨೦ ಮೀ. ತಲುಪಿದೆ. ೩೮೩ ಕ್ಯೂಸೆಕ್ ಒಳಹರಿವಿದೆ. ಇದನ್ನು ನೋಡಿ ಮುನ್ನೆಚ್ಚರಿಕೆಯಾಗಿ ಒಳಹರಿವಿನಷ್ಟೇ ನೀರು ನಾಲಾಕ್ಕೆ ಬಿಡಲಾಗುತ್ತದೆ. ಮುಚಳಂಬ, ತೊಗಲೂರು, ಮೋರಂಬಿ, ಗೌಂಡಗಾAವ, ಕುಂಟೆಗಾ0ವ, ಲಾಧಾ, ಇಂಚೂರ ಸೇರಿ ನಾಲಾ ಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ನಾಲಾದಲ್ಲಿ ಇಳಿಯುವುದು, ಈಜಾಡುವುದು, ಬಟ್ಟೆ ಒಗೆಯುವುದು, ದನಗಳಿಗೆ ನೀರು ಕುಡಿಸುವುದನ್ನು ಮಾಡಬಾರದು ಎಂದು ಕೋರಿದ್ದಾರೆ. ನಗರ ಸೇರಿ ತಾಲೂಕಿನಲ್ಲಿ ನಿರಂತರ ಮಳೆಯಿಂದ ಹಳ್ಳ-ಕೊಳ್ಳಗಳಿಗೆ ನೀರು ಬಂದಿದೆ. ಹಳೆಯ ಮತ್ತು ಮಣ್ಣಿನ ಮನೆ ಮಾಳಿಗೆ, ಗೋಡೆಗಳು ನೆನೆದು ಕುಸಿಯುತ್ತಿವೆ. ಚಿತ್ತಕೊಟ್ಟಾ, ಜಾಫರವಾಡಿ, ಕಿಣ್ಣಿ ಸೇರಿ ವಿವಿಧ ಗ್ರಾಮಗಳಲ್ಲಿ ೨೦ಕ್ಕೂ ಹೆಚ್ಚು ಮನೆ ಗೋಡೆ ಕುಸಿದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts