More

    ಕೋಲ್​ಮನ್ ಅಮಾನತು

    ವಾಷಿಂಗ್ಟನ್: ಉದ್ದೀಪನ ಪರೀಕ್ಷೆಯನ್ನು ತಪ್ಪಿಸಿಕೊಂಡ 100 ಮೀಟರ್ ಓಟದ ಹಾಲಿ ವಿಶ್ವ ಚಾಂಪಿಯನ್ ಕ್ರಿಶ್ಚಿಯನ್ ಕೋಲ್​ಮನ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

    ಟೋಕಿಯೊ ಒಲಿಂಪಿಕ್ಸ್ 100 ಮೀಟರ್ ಓಟದ ಸ್ವರ್ಣ ಪದಕ ಆಕಾಂಕ್ಷಿಯಾಗಿರುವ ಅಮೆರಿಕದ ಅಥ್ಲೀಟ್ ಕೋಲ್​ವುನ್ ಕಳೆದ 12 ತಿಂಗಳಲ್ಲಿ 3 ಬಾರಿ ಉದ್ದೀಪನ ಪರೀಕ್ಷೆ ತಪ್ಪಿಸಿಕೊಂಡಿರುವ ಕಾರಣದಿಂದಾಗಿ ಅಮಾನತು ವಿಶ್ವ ಅಥ್ಲೆಟಿಕ್ಸ್​ನ ಅಥ್ಲೆಟಿಕ್ ಇಂಟೆಗ್ರಿಟಿ ಯುನಿಟ್​ನಿಂದ (ಎಐಯು) ಅಮಾನತು ಶಿಕ್ಷೆ ಎದುರಿಸಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಸ್ಪರ್ಧೆ ಹೊರತಾದ ಡೋಪಿಂಗ್ ಪರೀಕ್ಷೆಗಾಗಿ ಕೋಲ್​ವುನ್ ಮನೆಗೆ ಎಐಯು ಅಧಿಕಾರಿಗಳು ತೆರಳಿದ್ದರು. ಆದರೆ ಆ ಸಮಯದಲ್ಲಿ ಸಮೀಪದ ಮಾಲ್​ಗೆ ಕ್ರಿಸ್ಮಸ್ ಶಾಪಿಂಗ್​ಗಾಗಿ ತೆರಳಿದ್ದ ಕಾರಣ ಕೋಲ್​ವುನ್ ಮನೆಯಲ್ಲಿರಲಿಲ್ಲ. 24 ವರ್ಷದ ಕೋಲ್​ವುನ್ ಸರಣಿ ಟ್ವೀಟ್​ಗಳ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.

    ಇದನ್ನೂ ಓದಿ: 1,000 ರೂಪಾಯಿ ಬಾಡಿಗೆಗೆ ಬಡವರಿಗೆ ಮನೆ – ಮೋದಿ ಸರ್ಕಾರದ ಯೋಜನೆ

    ಒಂದು ಗಂಟೆ ಕಾಲ ಕೋಲ್​ವುನ್ ಮನೆ ಎದುರಿದ್ದ ಎಐಯು ಅಧಿಕಾರಿಗಳು ಪ್ರತಿ 10 ನಿಮಿಷಕ್ಕೊಮ್ಮೆ ಕಾಲಿಂಗ್ ಬೆಲ್ ಒತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಆ ಸಮಯದಲ್ಲಿ ತಮಗೆ ಕರೆ ಯಾಕೆ ಮಾಡಲಿಲ್ಲ ಎಂದು ಕೋಲ್​ವುನ್ ಪ್ರಶ್ನಿಸಿದ್ದಾರೆ. ಅವರು ಇದಕ್ಕೆ ಮುನ್ನ 2019ರ ಜನವರಿ 16 ಮತ್ತು ಏಪ್ರಿಲ್ 26ರಂದು ಡೋಪಿಂಗ್ ಟೆಸ್ಟ್ ತಪ್ಪಿಸಿಕೊಂಡಿದ್ದರು. ಆದರೆ ತಾನೆಂದೂ ನಿರ್ವಹಣೆ ಸುಧಾರಿಸಲು ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಕೋಲ್​ವುನ್ ಸ್ಪಷ್ಟಪಡಿಸಿದ್ದಾರೆ.

    ಮೊರಟೋರಿಯಂ ಅವಧಿಯಲ್ಲಿ ಬಡ್ಡಿ ಮೇಲೆ ಬಡ್ಡಿ ವಿಧಿಸಿದರೆ ಉದ್ದೇಶ ಈಡೇರುತ್ತದೆಯೇ?: ಸುಪ್ರೀಂ ಕೋರ್ಟ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts