More

    VIDEO: ‘ಯೂನಿವರ್ಸಲ್ ಬಾಸ್’ ಕ್ರಿಸ್ ಗೇಲ್‌ಗೆ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಯೂನಿವರ್ಸಲ್ ಬಾಸ್ ಎಂದೇ ಕರೆಯಲ್ಪಡುವ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಸೋಮವಾರ 41ನೇ ವರ್ಷಕ್ಕೆ ಕಾಲಿಟ್ಟರು. ಈ ವಯಸ್ಸಿನಲ್ಲೂ ಸ್ಪರ್ಧಾತ್ಮಕ ಕ್ರಿಕೆಟ್ ಆಡುತ್ತಿರುವ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಅಚ್ಚು ಮೆಚ್ಚಿನ ಆಟಗಾರ ಎನಿಸಿದ್ದಾರೆ. ವೆಸ್ಟ್ ಇಂಡೀಸ್ ಪರ 103 ಟೆಸ್ಟ್, 301 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಭಾನುವಾರ ತಡರಾತ್ರಿ ಪಂಜಾಬ್ ತಂಡದ ಆಟಗಾರರು ಕೇಕ್ ಕತ್ತರಿಸಿ ಗೇಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

    ಇದನ್ನೂ ಓದಿ: ಅರಬ್ ರಾಷ್ಟ್ರದಲ್ಲಿ ಐಪಿಎಲ್ ಬಿಸಿ ಏರಿಸಿದ ‘ಶಾರ್ಟ್ ರನ್’ ವಿವಾದ!

    ಭಾರತದ ಕ್ರೀಡಾಭಿಮಾನಿಗಳ ನೆಚ್ಚಿನ ಆಟಗಾರನಾಗಿರುವ ಗೇಲ್ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆಯುತ್ತಿದ್ದಾರೆ. ಆರಂಭದಲ್ಲಿ ಕೆಕೆಆರ್ ತಂಡ ಸೇರ್ಪಡೆಗೊಂಡ ಗೇಲ್, ಬಳಿಕ ಆರ್‌ಸಿಬಿ ಸೇರಿದ್ದರು. ಆರ್‌ಸಿಬಿ ತಂಡದಲ್ಲಿದ್ದ ವೇಳೆ ರನ್‌ಹೊಳೆಯನ್ನೇ ಹರಿಸಿದ್ದರು. 2018ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 7215, ಏಕದಿನ ಕ್ರಿಕೆಟ್‌ನಲ್ಲಿ 10480 ಹಾಗೂ ಟಿ20ಯಲ್ಲಿ 1627 ರನ್ ಬಾರಿಸಿದ್ದಾರೆ. ಜತೆಗೆ 2 ಬಾರಿ ಟಿ20 ವಿಶ್ವಕಪ್ ಜಯಿಸಿದ ವಿಂಡೀಸ್ ತಂಡದ ಸದಸ್ಯರಾಗಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ಎದುರು ಕೇವಲ 30 ಎಸೆತಗಳಲ್ಲಿ ಗೇಲ್ 100 ರನ್ ಸಿಡಿಸಿದ್ದರು. ಆ ಪಂದ್ಯದಲ್ಲಿ 66 ಎಸೆತಗಳಲ್ಲಿ 175 ಗಳಿಸಿದ್ದರು. ಇದು ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ಪೇರಿಸಿದ ವೈಯಕ್ತಿಕ ಅಧಿಕಮೊತ್ತ ಇದಾಗಿದೆ.

    ಇದನ್ನೂ ಓದಿ: ಜಾಮೀನು ಕೇಳೋದು ಬಿಟ್ಟು, ತನ್ನ ವಿರುದ್ಧದ ಕೇಸ್​ ಅನ್ನೇ ರದ್ದು ಮಾಡಿ ಎಂದ ಆದಿತ್ಯ ಆಳ್ವ

    ಗೇಲ್ ಲೀಗ್‌ನಲ್ಲಿ ಇದುವರೆಗೂ 326 ಸಿಕ್ಸರ್ ಸಿಡಿಸಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 212 ಸಿಕ್ಸರ್ ಸಿಡಿಸಿರುವ ಎಬಿ ಡಿವಿಲಿಯರ್ಸ್‌ 2ನೇ ಸ್ಥಾನದಲ್ಲಿದ್ದಾರೆ.

    https://www.instagram.com/p/CFZmt4lg6Hx/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts