More

    ಬಸ್ ನಿಲ್ದಾಣ, ಪ್ರಯಾಣಿಕರು ಹೈರಾಣ

    ರಾಣೆಬೆನ್ನೂರ: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಕ್ರಾಸ್ ಬಳಿಯ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಯಾಣಿಕರು ಬಸ್​ಗಳಿಗಾಗಿ ಬಿಸಿಲಲ್ಲಿ ನಿಲ್ಲುವ ಸ್ಥಿತಿ ನಿರ್ವಣವಾಗಿದೆ.

    ರಾಣೆಬೆನ್ನೂರ ನಗರದಿಂದ ಗುತ್ತಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಚೌಡಯ್ಯದಾನಪುರ ಕ್ರಾಸ್ ಬಳಿ ಬಸ್ ನಿಲ್ದಾಣವಿದೆ. ಈ ಮಾರ್ಗವಾಗಿ ಗುತ್ತಲ, ಹೂವಿನಹಡಗಲಿ, ಬಳ್ಳಾರಿ, ಹೊಸಪೇಟೆ ಸೇರಿ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬಸ್​ಗಳು ಸಂಚರಿಸುತ್ತದೆ. ಚೌಡಯ್ಯದಾನಪುರ, ವೈ.ಟಿ. ಹೊನ್ನತ್ತಿ, ನರಸೀಪುರ ಸೇರಿ ವಿವಿಧ ಗ್ರಾಮಗಳ ಜನರು ಚೌಡಯ್ಯದಾನಪುರ ಕ್ರಾಸ್​ನ ಬಸ್ ನಿಲ್ದಾಣ ಅವಲಂಬಿಸಿದ್ದಾರೆ.

    ಶಾಸಕರ ಅಭಿವೃದ್ಧಿ ಯೋಜನೆಯ ಅನುದಾನದಡಿ ಹಲವು ವರ್ಷದ ಹಿಂದೆ ಬಸ್ ನಿಲ್ದಾಣ ನಿರ್ವಿುಸಲಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದೆ ಬಸ್ ನಿಲ್ದಾಣ ಈಗ ಸಂಪೂರ್ಣ ಹದಗೆಟ್ಟು ಹೋಗಿದೆ. ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ನೆಲಹಾಸಿಗೆ ಹಾಕಿದ್ದ ಕಾಂಕ್ರೀಟ್ ಸಂಪೂರ್ಣ ಕಿತ್ತು ಹೋಗಿದ್ದು, ಪ್ರಯಾಣಿಕರು ನಿಂತುಕೊಳ್ಳಲು ಆಗದ ಸ್ಥಿತಿಯಿದೆ.

    ಪ್ರಯಾಣಿಕರು ನಿತ್ಯವೂ ಬಸ್ ನಿಲ್ದಾಣದ ಹೊರ ಭಾಗದಲ್ಲಿ ನಿಂತುಕೊಳ್ಳುತ್ತಿದ್ದಾರೆ. ನಿಲ್ದಾಣದ ಅಕ್ಕಪಕ್ಕದಲ್ಲಿ ಗಿಡಗಳು ಸಹ ಇಲ್ಲದ ಕಾರಣ ಜನತೆ ಅನಿವಾರ್ಯವಾಗಿ ಬಿಸಿಲಿನಲ್ಲಿಯೇ ನಿಂತುಕೊಳ್ಳಬೇಕಿದೆ.

    ಬಸ್ ನಿಲ್ದಾಣ ಅಭಿವೃದ್ಧಿ ಪಡಿಸುವ ಸಲುವಾಗಿ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಹಲವು ಬಾರಿ ಶಾಸಕರಿಗೆ, ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಬಸ್ ನಿಲ್ದಾಣ ದುರಸ್ತಿ ಪಡಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

    ಚೌಡಯ್ಯದಾನಪುರ ಕ್ರಾಸ್​ನ ಬಸ್ ನಿಲ್ದಾಣದ ದುರಸ್ತಿ ಕುರಿತು ಅನುದಾನ ಲಭ್ಯತೆ ನೋಡಿಕೊಂಡು ಅಲ್ಲಿನ ಗ್ರಾಪಂನವರ ಗಮನಕ್ಕೆ ತಂದು ಅಭಿವೃದ್ಧಿ ಪಡಿಸಲು ತಿಳಿಸಲಾಗುವುದು.

    | ಟಿ.ಆರ್. ಮಲ್ಲಾಡದ ತಾಪಂ ಇಒ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts