More

    ಪೌಷ್ಟಿಕತೆಗೆ ಜಂತುಹುಳು ಕಂಟಕ

    ಚಳ್ಳಕೆರೆ: ಮಕ್ಕಳಲ್ಲಿ ಪೌಷ್ಟಿಕತೆಗೆ ಜಂತುಹುಳು ಕಂಟಕವಾಗಿದ್ದು, ಇದರ ನಿವಾರಣೆಗೆ ಮಾತ್ರೆ ವಿತರಣೆ ಕಾರ್ಯಕ್ರಮಕ್ಕೆ ಫೆ.10ರಂದು ಚಾಲನೆ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎನ್. ಪ್ರೇಮಸುಧಾ ಹೇಳಿದರು.

    ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಜಂತುಹುಳು ನಿವಾರಣಾ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿರ್ವಹಣಾ ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಣ ಇಲಾಖೆಯ ಸಹಕಾರ ಅಗತ್ಯ ಎಂದು ತಿಳಿಸಿದರು.

    ಸದೃಢ ಸಮಾಜಕ್ಕಾಗಿ ಮಕ್ಕಳ ಆರೋಗ್ಯ ಪೋಷಿಸುವ ಕೆಲಸ ಆಗಬೇಕಿದೆ. ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಜಂತುಹುಳು ಸಮಸ್ಯೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತದೆ. ಇದರ ನಿವಾರಣೆಗಾಗಿ ಸರ್ಕಾರ ಜಂತುಹುಳು ನಿವಾರಣೆ ಮಾತ್ರೆ ವಿತರಣೆ ಕಾರ್ಯಕ್ರಮ ಕೈಗೊಂಡಿದ್ದು, ಪಾಲಕರು, ಶಿಕ್ಷಣ ಇಲಾಖೆ ಎಲ್ಲ ಮಕ್ಕಳಿಗೂ ಮಾತ್ರೆ ಕೊಡಿಸುವ ಹೊಣೆ ವಹಿಸಿಕೊಳ್ಳಬೇಕು ಎಂದರು.

    ಮಾತ್ರೆ ಬಳಕೆಯಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಅಂಗನವಾಡಿ ಮಕ್ಕಳಿಗೆ ಅರ್ಧ ಮಾತ್ರೆ, ಶಾಲಾ ಮಕ್ಕಳಿಗೆ ಪೂರ್ಣ ಮಾತ್ರ ಬಳಸಬೇಕು ಎಂದು ತಿಳಿಸಿದರು.

    ಬಿಇಒ ಸಿ.ಎಸ್.ವೆಂಕಟೇಶ್, ಶಿಕ್ಷಣ ಸಮನ್ವಯಾಧಿಕಾರಿ ಮಂಜಣ್ಣ, ಅಕ್ಷರ ದಾಸೋಹ ನಿರ್ದೇಶಕ ತಿಪ್ಪೇಸ್ವಾಮಿ, ಮುಖ್ಯಶಿಕ್ಷಕ ಪಾಲಯ್ಯ, ಆರೋಗ್ಯ ಸಹಾಯಕರಾದ ಎನ್.ಪ್ರೇಮ್‌ಕುಮಾರ್, ಎಸ್.ಬಿ.ತಿಪ್ಪೇಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts