More

    ಪೌರಾಣಿಕ ನಾಟಕ ಪ್ರದರ್ಶನ ಮರೆ

    ಚಳ್ಳಕೆರೆ; ಬದಲಾಗುತ್ತಿರುವ ಸಮಾಜದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ಮರೆಯಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ಚಳ್ಳಕೆರಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ದ್ರೌಪದಿ ವಸ್ತ್ರಾಪಹರಣ ಬಯಲಾಟ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದರು.

    ಕುರುಕ್ಷೇತ್ರ, ಗಜಗೌರಿ ವ್ರತ, ಶ್ರೀಕೃಷ್ಣ ಗಾರುಡಿ ಪೌರಾಣಿಕ ನಾಟಕಗಳು ಮಾನವ ಸಂಬಂಧ, ಸತ್ಯಾನ್ವೇಷಣೆಯ ಕನ್ನಡಿಯಾಗಿವೆ. ಇಂತಹ ನಾಟಕಗಳು ಮೊಬೈಲ್, ಧಾರಾವಾಹಿಗಳ ಆಕರ್ಷಣೆಯಿಂದ ಮರೆಯಾಗುತ್ತಿವೆ ಎಂದು ಬೇಸರಿಸಿದರು.

    ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ನಾಟಕವನ್ನು ಕೇವಲ ಮನರಂಜನೆಗೆ ನೋಡಬಾರದು. ಅದರಲ್ಲಿ ಬರುವ ಕಥಾ ಪ್ರಸಂಗ, ಸಾರಾಂಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದು ಸಲಹೆ ನೀಡಿದರು.

    ಎಸ್ಪಿ ಜಿ.ರಾಧಿಕಾ ಮಾತನಾಡಿ, ಆಧುನಿಕ ಮಾಧ್ಯಮಗಳ ಹಾವಳಿಯಲ್ಲೂ ಬಯಲಾಟ ಕಲೆ ಪ್ರದರ್ಶಿಸುವ ಸ್ಥಳೀಯ ಕಲಾವಿದರ ಆಸಕ್ತಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.

    ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಐತಿಹಾಸಿಕ ಘಟನೆ ಆಧಾರಿತ ನಾಟಕಗಳು ಜೀವನ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಯಲಾಟ ಮತ್ತು ರಂಗ ನಾಟಕ ಉಳಿಸಿಕೊಳ್ಳುವ ಪ್ರಯತ್ನ ಎಲ್ಲರಿಂದಲೂ ಆಗಬೇಕಿದೆ ಎಂದು ತಿಳಿಸಿದರು.

    ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಪೊಲೀಸ್ ಉಪನಿರೀಕ್ಷಕ ರೋಷನ್ ಜಮೀರ್, ಸಿಪಿಐ ಈ.ಆನಂದ್, ಪೊಲೀಸ್ ಉಪನಿರೀಕ್ಷಕ ಎಸ್.ಡಿ.ನೂರ್ ಅಹಮ್ಮದ್, ಹನುಮಂತರಾಯ, ಟಿ.ರವಿಕುಮಾರ್, ಪಾಲಯ್ಯ, ತಿಪ್ಪೇರುದ್ರಪ್ಪ, ಓಬಣ್ಣ, ಪಾಪೇಶ್, ಸಣ್ಣ ಪಾಲಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts