More

    ಶಿಕ್ಷಕರಿಂದ ಮಾತ್ರ ಸಮಾಜ ಸುಧಾರಣೆ

    ಚಿತ್ತಾಪುರ: ಶಿಕ್ಷಣ ನೀಡಿ ಸಮಾಜದಲ್ಲಿ ಸಂಸ್ಕೃತಿ ಬೆಳೆಸುವಂತಹ ಕೆಲಸ ಶಿಕ್ಷಕರು ಮಾಡುತ್ತಿದ್ದು, ಶಿಕ್ಷಣ ಒಂದಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂದು ಯಾದಗಿರಿ-ರಾಯಚೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ಪಿ.ವೇಣುಗೋಪಾಲ ಹೇಳಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಸಹಯೋಗದಡಿ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಸರ್ವತೋಮುಖ ಅಭಿವೃದ್ಧಿ ಶಿಕ್ಷಕ ಸಮುದಾಯದಿಂದ ಮಾತ್ರ ಸಾಧ್ಯ. ಸಮಾಜ ತಿದ್ದುವಂತಹ ಕೆಲಸ ಮಾಡುತ್ತಿರುವ ಏಕೈಕ ಸಮುದಾಯ ಶಿಕ್ಷಕರದು ಎಂದು ಕೊಂಡಾಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲï ಮಾತನಾಡಿ, ಮಕ್ಕಳನ್ನು ಉನ್ನತ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಾನವೀಯ ಮೌಲ್ಯ ಕಲಿಸಬೇಕು ಎಂದು ಸಲಹೆ ನೀಡಿದರು.

    ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಪ್ರಾಸ್ತಾವಿಕ ಮಾತನಾಡಿದರು.

    ಪ್ರಮುಖರಾದ ರವೀಂದ್ರರೆಡ್ಡಿ, ರಾಜೇಂದ್ರ ಪ್ರಸಾದ, ದೇವಿಂದ್ರರೆಡ್ಡಿ ದುಗನೂರ, ರಮೇಶ ಬಟಗೇರಿ, ಶರಣಬಸಪ್ಪ ಬೊಮ್ಮನಳ್ಳಿ, ಪ್ರಕಾಶ ನಾಯಿಕೋಡಿ, ದೇವಿಂದ್ರರೆಡ್ಡಿ, ಶಿವಕುಮಾರ ಘಾವರಿಯಾ, ಬಸಪ್ಪ ಯಂಬತ್ನಾಳ, ಲಾಲ್ ಅಹ್ಮದ್, ಪ್ರಕಾಶ ನಾಯ್ಕೋಡಿ, ಹೀರಾಲಾಲ್ ರಾಠೋಡ್, ಅಬ್ದುಲ್ ಸಲೀಂ ಪ್ಯಾರೆ, ಶಿವಬಸಪ್ಪ, ಸಂತೋಷ ಕೋಮಟೆ ಇತರರಿದ್ದರು.

    ಮಲ್ಲಿಕಾರ್ಜುನ ಸೇಡಂ ಸ್ವಾಗತಿಸಿದರು. ಸಂತೋಷ ಶಿರನಾಳ ನಿರೂಪಣೆ ಮಾಡಿ ವಂದಿಸಿದರು. ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts