More

    ಆರೋಗ್ಯಕ್ಕೆ ಯೋಗ ಸಹಕಾರಿ

    ಚಿತ್ರದುರ್ಗ: ಒತ್ತಡ, ದುಶ್ಟಟಗಳಿಂದ ಮುಕ್ತವಾಗಿ ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಯೋಗ ಸಹಕಾರಿಯಾಗುತ್ತದೆ ಎಂದು ಚಂದ್ರವಳ್ಳಿ ಎಸ್‌ಜೆಎಂ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ.ರಮೇಶ್ ಹೇಳಿದರು.

    ಜಿಲ್ಲಾ ಯೋಗ ತರಬೇತಿ ಸಂಸ್ಥೆ ಕಾಲೇಜಿನಲ್ಲಿ 8 ದಿನಗಳ ಯೋಗ ಉಚಿತ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

    ವಿದ್ಯಾರ್ಥಿ ದೆಸೆಯಿಂದಲೇ ಆರೋಗ್ಯ ಕಾಪಾಡಿಕೊಳ್ಳಬೇಕು. ಇದಕ್ಕೆ ಯೋಗ, ಧ್ಯಾನ ನೆರವಾಗುತ್ತವೆ. ಯೋಗದಿಂದ ಜ್ಞಾಪಕ ಶಕ್ತಿ ಹೆಚ್ಚಲಿದ್ದು, ಲವಲವಿಕೆ ಜೀವನ ಸಾಗಿಸಬಹುದು ಎಂದರು.

    ಜಿಲ್ಲಾ ಯೋಗ ತರಬೇತಿ ಸಂಸ್ಥೆ ಅಧ್ಯಕ್ಷ ಎಲ್.ಎಸ್.ಚಿನ್ಮಯಾನಂದ ಮಾತನಾಡಿ, ಆರೋಗ್ಯ ಚೆನ್ನಾಗಿದ್ದರೆ ಉತ್ತಮ ಭವಿಷ್ಯದೊಂದಿಗೆ ಸಾರ್ಥಕ ಜೀವನ ನಡೆಸಬಹುದು. ಯೋಗದಿಂದ ಎಲ್ಲ ಕಾಯಿಲೆಗೆ ತಡೆ ಹಾಕಬಹುದು ಎಂದು ತಿಳಿಸಿದರು.

    ಯೋಗ ತರಬೇತಿ ರಂಗಸ್ವಾಮಿ ಮಾತನಾಡಿದರು. ಪ್ರೊ.ಜಿ.ಎನ್.ಬಸವರಾಜಪ್ಪ, ಪ್ರೊ.ಎಚ್.ಕೆ.ಶಿವಪ್ಪ, ನ್ಯಾಕ್ ಸಂಯೋಜಕ ಡಾ.ಆರ್.ವಿ.ಹೆಗಡಾಳ್, ಪ್ರೊ.ಆರ್.ಕೆ.ಕೇದಾರ್‌ನಾಥ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts