More

    ಭದ್ರೆ ಕಾಮಗಾರಿ ಶೀಘ್ರ ಪುನರಾರಂಭ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ತರೀಕೆರೆ ತಾಲೂಕು ಅಜ್ಜಂಪುರದ ವೈ ಜಂಕ್ಷನ್ (ಕಿ.ಮೀ. 8.916) ಬಳಿ ಹಲವು ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಅಂದಾಜು 16.78 ಕೋಟಿ ರೂ. ವೆಚ್ಚದ ರೈಲ್ವೆ ಕ್ರಾಸಿಂಗ್ ಕಾಮಗಾರಿಗೆ ಸದ್ಯದಲ್ಲೇ ಮರು ಚಾಲನೆ ದೊರೆಯಲಿದೆ.

    ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಸೋಮವಾರ ಮೈಸೂರಿನ ನೈಋತ್ಯರೈಲ್ವೆ ವಿಭಾಗೀಯ ಕಚೇರಿಯಲ್ಲಿ ರೈಲ್ವೆ ಹಾಗೂ ಭದ್ರಾ ಮೇಲ್ದಂಡೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ನಡೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

    ಗುತ್ತಿಗೆದಾರ ಹಾಗೂ ರೈಲ್ವೆ ಇಲಾಖೆ ನಡುವೆ ಉಂಟಾಗಿದ್ದ ವಿವಾದ ತಿಳಿಗೊಳಿಸಿ ಕಾಮಗಾರಿ ಬಗೆಹರಿಸಲು ಸಂಸದರು ಈ ಮುನ್ನ ಮೂರು ಸಭೆಗಳನ್ನು ನಡೆಸಿದ್ದು, ಇದೀಗ ಗೊಂದಲಗಳು ಬಗೆಹರಿದಿವೆ. ಮುಂದಿನ ಸೋಮವಾರದೊಳಗೆ ಕಾಮಗಾರಿ ಪುನರಾರಂಭವಾಗಲಿದೆ ಎಂದು ಸಂಸದರು ವಿಜಯವಾಣಿಗೆ ತಿಳಿಸಿದ್ದಾರೆ.

    ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗಾರ್ಗ್, ರೈಲ್ವೆ ಸೀನಿಯರ್ ಡಿವಿಜನಲ್ ಇಂಜಿನಿಯರ್ ಕೆ.ರವಿಚಂದ್ರನ್, ಡಿವಿಜನಲ್ ಇಂಜಿನಿಯರ್ ವೆಂಕಟರಾವ್, ಭದ್ರಾ ಮೇಲ್ದಂಡೆ ಚೀಫ್ ಇಂಜಿನಿಯರ್ ಶಿವಕುಮಾರ್, ಗುತ್ತಿಗೆದಾರ ಕೋಟೇಶ್ವರಾವ್ ಮತ್ತಿತರರು ಇದ್ದರು.

    ನ್ಯಾಯಾಲಯದ ಮೆಟ್ಟಲೇರಿತ್ತು: ಚಿತ್ರದುರ್ಗ ಮತ್ತು ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಮುಖ್ಯವಾಗಿರುವ ವೈಜಂಕ್ಷನ್ ಬಳಿಯ ಈ ರೈಲ್ವೆ ಕ್ರಾಸಿಂಗ್ ಕಾಮಗಾರಿಗೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದ ಕೋರ್ಟ್ ಕಚೇರಿ ಮೆಟ್ಟಿಲೇರಿ ಕಗ್ಗಂಟಾಗಿತ್ತು.

    ಇದರಿಂದಾಗಿ ಹಿರಿಯೂರು ತಾಲೂಕು ವಾಣಿವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ನೀರು ಹರಿಸುವುದು ಕೂಡ ವಿಳಂಬವಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ವಾಣಿವಿಲಾಸಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲು ರೈಲ್ವೇ ಕ್ರಾಸಿಂಗ್ ಬಳಿ ಭದ್ರಾ ಮೇಲ್ದಂಡೆ ಅಧಿಕಾರಿಗಳು ತರಾತುರಿಯಲ್ಲಿ ತಾತ್ಕಾಲಿಕವಾಗಿ 2.2 ಮೀಟರ್ ವ್ಯಾಸದ ಎರಡು ಪೈಪ್‌ಗಳನ್ನು ಅಳವಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts