More

    ಗ್ರಾಪಂಗಳಿಗೆ ಆಡಳಿತಾಧಿಕಾರಿ ಬೇಕೆ ಬೇಡವೇ

    ಚಿತ್ರದುರ್ಗ: ಇದೇ ಮೇ-ಜೂನ್‌ನಲ್ಲಿ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ರಾಜ್ಯದ 6021 ಗ್ರಾಪಂಗಳಿಗೆ, ಆಡಳಿತಾಧಿಕಾರಿ ನೇಮಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತಂತೆ ಮಂಗಳವಾರ ನಡೆಯುವ ಸಂಪುಟ ಉಪ ಸಮಿತಿ ಸಭೆ ನಿರ್ಧರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಕಾರಣದಿಂದಾಗಿ ಚುನಾವಣೆ ಮುಂದೂಡ ಬೇಕೆಂಬ ಕೋರಿಕೆಯನ್ನು ಮನ್ನಿಸಿರುವ ರಾಜ್ಯ ಚುನಾವಣಾ ಆಯೋಗ ಎಷ್ಟು ಕಾಲ ಮುಂದೂಡಲಾಗುತ್ತಿದೆ ಎಂಬುದನ್ನು ತಿಳಿಸಿಲ್ಲ. ಅವಧಿ ಪೂರ್ಣಗೊಳಿಸಿರುವ ಗ್ರಾಪಂಗಳ ಕುರಿತಂತೆ ಪಂ.ರಾಜ್ ಆಕ್ಟ್‌ನಲ್ಲಿ ಮೂರು ರೀತಿಯ ಅವಕಾಶವಿದೆ.

    ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕ, ಈಗಿರುವವರೇ ಕೆಲ ಕಾಲ ಅಧಿಕಾರದಲ್ಲಿ ಮುಂದುವರಿಸುವುದು ಅಥವಾ ಹೊಸಬರ ನಾಮಕರಣ. ಇವುಗಳಲ್ಲಿ ಯಾವುದನ್ನು ಅನುಷ್ಠಾನಗೊಳಿಸ ಬೇಕೆಂಬುದರ ಬಗ್ಗೆ ಸಂಪುಟ ಉಪ ಸಮಿತಿ ಚರ್ಚಿಸಿ ನಿರ್ಧರಿಸಲಿದೆ ಎಂದರು.

    ದೇಶದೆಲ್ಲ ಪ್ರತಿಪಕ್ಷಗಳು ಸಹಕರಿಸುತ್ತಿವೆ. ಆದರೆ, ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ವರಿಷ್ಠರ ಪ್ರೀತಿ ಗಳಿಸಲು ಸಲ್ಲದ ಹೇಳಿಕೆ ಕೊಡುತ್ತಿದ್ದಾರೆ.

    ಮದ್ಯ ಮಾರಾಟ ನಿಷೇಧಿಸಬೇಕೆಂದು ಮಠಾಧೀಶರು ಮೊದಲಿಂದಲೂ ಒತ್ತಾಯಿಸುತ್ತಿದ್ದಾರೆ. ಆದರೆ, ರಾಜ್ಯ, ದೇಶದ ಆರ್ಥಿಕ ಪರಿಸ್ಥಿತಿಯನ್ನೂ ನೋಡಬೇಕಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts