More

    ಮೂರು ದೇಗುಲಗಳಲ್ಲಿ ಸಪ್ತಪದಿ

    ಚಿತ್ರದುರ್ಗ: ರಾಜ್ಯ ಸರ್ಕಾರದ ನೂತನ ಕಾರ್ಯಕ್ರಮ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜಿಲ್ಲೆಯ ಮೂರು ದೇವಾಲಯಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಸಪ್ತಪದಿ ಬಡವ ಬಲ್ಲದೆ ಎನ್ನದೇ ಸಮಾಜದ ಎಲ್ಲ ವರ್ಗದವರು ಸರಳ ವಿವಾಹವಾಗಲು ಅವಕಾಶವಿದೆ. ಇದಕ್ಕಾಗಿ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ಹಿರಿಯೂರು ತಾಲೂಕು ವದ್ದಿಕೆರೆ ಕಾಲ ಭೈರವೇಶ್ವರ ಸ್ವಾಮಿ ಹಾಗೂ ಹೊಸದುರ್ಗ ತಾಲೂಕು ಗವಿರಂಗಾಪುರ ಬೆಟ್ಟದ ಗವಿರಂಗನಾಥ ಸ್ವಾಮಿ ದೇವಸ್ಥಾನಗಳಲ್ಲಿ ಏಪ್ರಿಲ್ 26 ಹಾಗೂ ಮೇ 24ರಂದು ಎರಡು ಹಂತಗಳಲ್ಲಿ ನಡೆಯಲಿದೆ.

    ಏ.26ರಂದು ನಡೆಯುವ ವಿವಾಹಕ್ಕೆ ಮಾರ್ಚ್ 27ರೊಳಗೆ ವಧು-ವರರು ಹೆಸರು ನೋಂದಾಯಿಸಿಕೊಳ್ಳಬೇಕು. ಏಪ್ರಿಲ್ 6ರೊಳಗೆ ವಧು-ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, 11ರಂದು ವಧುವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

    ಮೇ 24ರಂದು ನಡೆಯುವ ಮದುವೆಗೆ ಏಪ್ರಿಲ್ 24ರೊಳಗೆ ಹೆಸರು ನೋಂದಣಿ, ಮೇ 4ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ, ಮೇ 9ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts