More

    ಕನ್ನಡಿಗರ ಸ್ವಾಭಿಮಾನ ಕೆಣುಕುತ್ತಿದೆ

    ಚಿತ್ರದುರ್ಗ: ಜಾತಿಗೊಂದು ಪ್ರಾಧಿಕಾರ ರಚನೆ ಮೂಲಕ ಕನ್ನಡಿಗರನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಇಳಿಯಬೇಕಿದೆ ಎಂದು ಸಾಹಿತಿ ಬಿ.ಎಲ್.ವೇಣು ಹೇಳಿದರು.

    5ರಂದು ಕರ್ನಾಟಕ ಬಂದ್ ಬೆಂಬಲಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಕಾರ‌್ಯಕರ್ತರು ಗುರುವಾರ ಮುನ್ಸಿಪಲ್ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಬಂದ್ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

    ಮರಾಠ ಅಭಿವೃದ್ಧಿ ನಿಗಮ ರಚಿಸಿ, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ರಾಜ್ಯ ಸರ್ಕಾರದ ನಡೆ ವಿರುದ್ಧ ಇಂದು ಹೋರಾಟ ಅನಿವಾರ‌್ಯವಾಗಿದೆ. ಕನ್ನಡಕ್ಕೆ ಕುತ್ತು ಬಂದಾಗ ಪ್ರತಿಯೊಬ್ಬರೂ ಎಚ್ಚರವಹಿಸದಿದ್ದರೆ ಕನ್ನಡ ಉಳಿಯದು. ಸಾಹಿತಿಗಳು ಬರವಣಿಗೆ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಬಹುದೇ ವಿನಃ ನಿಜವಾಗಿ ಬೀದಿಗಿಳಿದು ಹೋರಾಟ ಮಾಡುವಂಥವರು ನಿಮ್ಮಂಥವರೆಂದು ಸೇನೆ ಕಾರ‌್ಯಕರ್ತರನ್ನುದ್ದೇಶಿಸಿ ಹೇಳಿದರು.

    ಇವತ್ತು ಮರಾಠಿ ನಿಗಮ, ನಾಳೆ ತೆಲುಗು, ತಮಿಳು, ಮಲಯಾಳಿ ನಿಗಮಗಳ ರಚನೆ ಆಗುತ್ತಿದೆಯೇ ಎಂದು ಪ್ರಶ್ನಿಸಿದ ವೇಣು ಅನ್ಯ ರಾಜ್ಯಗಳಲ್ಲಿ ಕನ್ನಡ ಪರ ಸಂಸ್ಥೆಗಳಿಲ್ಲವೆಂಬುದನ್ನು ನೆನಪಿಸಿದರು. ಬಂದ್‌ಗೆ ಬೆಂಬಲ ಸೂಚಿಸಿದ ಅವರು, ಶಾಂತಿಯುತ ಹೋರಾಟಕ್ಕೆ ಮನವಿ ಮಾಡಿದರು.

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಜಿಲ್ಲಾಧ್ಯಕ್ಷ ಟಿ.ಆನಂದ್ ಮಾತನಾಡಿ, ಕಾರವಾರಕ್ಕೆ ಫೋನ್ ಮಾಡಿದರೆ ಮಹಾರಾಷ್ಟ್ರಕ್ಕೆ ಸ್ವಾಗತದ ಧ್ವನಿ ಕೇಳಿಬರುತ್ತಿದ್ದು, ಇದು ನಾಡಿನಲ್ಲಿ ಕನ್ನಡಕ್ಕೆ ಎದುರಾಗಿರುವ ದುಸ್ಥಿತಿಯನ್ನು ಬಿಂಬಿಸುತ್ತದೆ ಎಂದರು.

    ರಾಘವೇಂದ್ರ, ಕುಮಾರ್, ಮಹಾಂತೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts