More

    ಹಿಂದು ಧರ್ಮದ ರಕ್ಷಕ ರಾಜ

    ಚಿತ್ರದುರ್ಗ: ಹಿಂದು ಧರ್ಮದ ರಕ್ಷಣೆಗೆ ಶಿವಾಜಿ ಮಹಾರಾಜರು ನಡೆಸಿದ ಹೋರಾಟಗಳು ಸ್ಮರಣೀಯ ಎಂದು ಸರ್ಕಾರಿ ಕಲಾ ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಚ್.ಗುಡ್ಡದೇಶ್ವರಪ್ಪ ಹೇಳಿದರು.

    ಜಿಲ್ಲಾಡಳಿತ ಬುಧವಾರ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.

    ಹಿಂದು ಧರ್ಮದ ವಿನಾಶಕ್ಕೆ ನಡೆದಿದ್ದ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಿದರು ಎಂದರು.

    ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಅನೇಕ ರಾಜರನ್ನು ಶಿವಾಜಿ ಸೋಲಿಸಿದ್ದರು. 1674ರಲ್ಲಿ ಛತ್ರಪತಿ ಬಿರುದು ಪಡೆದರು ಎಂದು ತಿಳಿಸಿದರು.

    ಸಮಾರಂಭ ಉದ್ಘಾಟಿಸಿ ಮಾತನಾಡಿದ ಎಡಿಸಿ ಸಿ.ಸಂಗಪ್ಪ , ಶಿವಾಜಿಯ ಧೈರ್ಯ, ಸಾಹಸ, ಆಡಳಿತದ ಚತುರತೆ ಎಲ್ಲರಿಗೂ ಮಾದರಿ. ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ಹಿರಿದು ಎಂದರು.

    ಮರಾಠ ಸಮುದಾಯದ ಯುವ ಸಂಘಟನೆ ಕಾರ್ಯದರ್ಶಿ ನಿತಿನ್ ಜಾಧವ್ ಮಾತನಾಡಿ, ಹಿಂದು ಧರ್ಮದ ರಕ್ಷಣೆಗೆ ಶಿವಾಜಿ ಮಹಾರಾಜರು ಶ್ರಮಿಸಿದರು ಎಂದು ಸ್ಮರಿಸಿದರು.

    ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾಬಾಯಿ, ಯುವ ಸಂಘಟನೆ ಕಾರ್ಯದರ್ಶಿ ಲೋಹಿತ್, ಮರಾಠ ಯುವಕ ಸಂಘದ ಮುಖಂಡ ಮಂಜುನಾಥ್ ಗಾಯಕ್‌ವಾಡ್ ಉಪಸ್ಥಿತರಿದ್ದರು.

    ಸಮಾರಂಭಕ್ಕೂ ಮೊದಲು ನಗರದ ಏಕನಾಥೇಶ್ವರಿ ಪಾದಗಟ್ಟೆಯಿಂದ ಶಿವಾಜಿ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts