More

    ನನ್ನನ್ನೂ ಏನೂ ಮಾಡಲಾಗದೆಂದ ಡಿ.ಕೆ.ಶಿವಕುಮಾರ್

    ಚಿತ್ರದುರ್ಗ: ಯಾವ ವಿಚಾರಣೆಯಿಂದಲೂ ನನ್ನನ್ನೂ ಏನೂ ಮಾಡಲಾಗದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,ಜಾಮೀನು ಮೇಲೆ ಶಿವಕುಮಾರ್ ಇದ್ದಾರೆಂಬ ಸಚಿವ ಅಶೋಕ್ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿ, ಮೂರು ವರ್ಷಗಳಿಂದ ನನಗೆ ಏನು ಆಗಿಲ್ಲ,ಮುಂದೇನೂ ಆಗಲ್ಲ.

    ನಮ್ಮ ಪಕ್ಷದ ಶಾಸಕರನ್ನು ನಾನು ರಕ್ಷಿಸಿಕೊಂಡಿದ್ದೇ. ಅದಕ್ಕಾಗಿ ಅಧಿಕಾರ ದುರ್ಬಳಕೆ ಹಾಗೂ ಆದಾಯ ತೆರಿಗೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಶೇ.40 ಕಮಿಷನ್,ಲಂಚ-ಮಂಚ ಬಿಜೆಪಿಗೆ ಬಂದಿರುವ ಬಳುವಳಿ. ಈ ಸರ್ಕಾರ ರಾಜ್ಯ,ದೇಶಕ್ಕೆ ಕೆಟ್ಟ ಹೆಸರು ತಂದಿದೆ. ನನಗೆ ಸಚಿವ ಅಶೋಕ್ ಅಥವಾ ಮತ್ಯಾರೋ ಏನನ್ನೂ ಹೇಳುವ ಅಗತ್ಯವಿಲ್ಲ.

    ಜನರೇ ಈ ಸರ್ಕಾರಕ್ಕೆ ಭ್ರಷ್ಟ ಸರ್ಕಾರವೆಂದು ಬಿರುದು ಕೊಟ್ಟಿದ್ದಾರೆ. ಭ್ರಷ್ಟತೆಯನ್ನು ತೊಳೆದು ರಾಜ್ಯದ ಗೌರವ ಉಳಿಸಲಿ ಎಂದ ಅವರು,ಭಾ ರತ್ ಜೋಡೋ ಅಲ್ಲ,ಕಾಂಗ್ರೆಸ್ ತೋಡೋ ಎಂಬ ಬಿಜೆಪಿ ವ್ಯಂಗ್ಯಕ್ಕೆ ನಮ್ಮ ವಿಚಾರ ನಾವೇನಾದರೂ ಮಾಡಿಕೊಳ್ಳುತ್ತೇವೆ. ಯಾತ್ರೆ ವೇಳೆ ರಾ ಹುಲ್ ಗೋಬ್ಯಾಕ್ ಅಭಿಯಾನ ಕುರಿತ ಬಿಜೆಪಿಯ ಮಾತಿಗೆ, ಗೋಬ್ಯಾಕ್ ಆದರೂ ಮಾಡಲಿ,ಕಂ ಬ್ಯಾಕ್ ಎಂದಾದರೂ ಅನ್ನಲಿ ಎಂದು ಬಿಜೆಪಿಯನ್ನು ಲೇವಡಿ ಮಾಡಿದರು.

    ಪಕ್ಷದ ಮತ್ತು ದೇಶದ ಹಿತ ದೃಷ್ಟಿಯಿಂದ ರಾಹುಲ್ಗಾಂಧಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳ ಬೇಕು.ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅವರು ತಿರಸ್ಕರಿಸಬಾರದು. ಗಾಂಧಿ ಕುಟುಂಬದಿಂದ ಮಾತ್ರ ಪಕ್ಷ ಮತ್ತು ದೇಶ ಸಂಘಟಿತವಾಗಿರಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts