More

    ಜೀವ ಉಳಿಬೇಕಾದ್ರೆ ಗೃಹಬಂಧನ ಅಗತ್ಯ

    ಚಿತ್ರದುರ್ಗ: ಕ್ವಾರಂಟೈನ್‌ಗೆ ಒಳಪಟ್ಟವರ ನಿಗಾಕ್ಕೆ ಮುರುಘಾಮಠದ ನಾನಾ ಸಂಸ್ಥೆಗಳಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಅವಕಾಶ ಮಾಡಿ ಕೊಡುವುದಾಗಿ ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

    ಬಸವೇಶ್ವರ ವೈದ್ಯಕೀಯ ಆಸ್ಪತ್ರೆ, ಇದರ ಎದುರಿನ ಎಸ್‌ಜೆಎಂ ಮಹಿಳಾ ವಸತಿ ನಿಲಯ, ಹೊಳಲ್ಕೆರೆ ರಸ್ತೆಯ ಎಸ್‌ಜೆಎಂ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ವಸತಿ ನಿಲಯ ಮತ್ತಿತರೆಡೆ ಕ್ವಾರಂಟೈನ್ ಅವಧಿ ಪೂರೈಸಬೇಕಿರುವ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡ ಲಾಗುವುದು ಎಂದು ಶರಣರು ಹೇಳಿದ್ದಾರೆ.

    ಸ್ವಯಂ ದಿಗ್ಬಂಧನ: ಕರೊನಾ ಸೋಂಕಿನ ಭೀಕರತೆ ಅರಿತು ಪ್ರತಿಯೊಬ್ಬರೂ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳಬೇಕು. ಪ್ರಾಣ ರಕ್ಷಣೆಗಾಗಿ ಜನರಿಗೆ ಗೃಹ ಬಂಧನ ಅತ್ಯಂತ ಅನಿವಾರ್ಯವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು.

    ಯಾವುದೇ ಹಂತದಲ್ಲೂ ಜನರು ಗುಂಪು ಸೇರಬಾರದು. ಅನಿವಾರ್ಯ ಸಂದರ್ಭದಲ್ಲಿ ರಸ್ತೆಗಿಳಿದಾಗ ಮಾಸ್ಕ್ ಹಾಕಿರಬೇಕು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಸಿವಿನಿಂದ ಪರಿತಪಿಸುವರ ಮೇಲೆ ಕರುಣೆ ತೋರಬೇಕು. ಅಗತ್ಯ ವಸ್ತುಗಳು ಸಿಗುತ್ತಿಲ್ಲ ಎಂಬ ಅಸಮಾಧಾನ ಹೋಗಲಾಡಿಸಲು ದಿನದಲ್ಲಿ ಕೆಲ ಗಂಟೆ ರಿಯಾಯಿತಿ ಕೊಡುವುದರಿಂದ ಅನುಕೂಲವಾಗುತ್ತದೆ. ಅಸಹಾಯಕರ ಸಹಾಯಕ್ಕಾಗಿ ಸರ್ಕಾರಗಳು ರೂಪಿಸಿರುವ ಸಾವಿರಾರು ಕೋಟಿ ರೂ.ಗಳ ಯೋಜನೆಗಳು ಸ್ವಾಗತಾರ್ಹ ಎಂದು ಹೇಳಿದ್ದಾರೆ.

    ಸಹನೆ ಕಳೆದುಕೊಳ್ಳದಿರಿ: ಗೃಹಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಬೇಸರ ಸಾಮಾನ್ಯ. ಆದ್ದರಿಂದ ಸಹನೆ ಕಳೆದುಕೊಳ್ಳದೇ, ಕಲೆ-ಹಾಡುಗಾರಿಕೆ, ಬರವಣಿಗೆ, ಕುಶಲಕಲೆ, ಮನೆಯವರೊಂದಿಗೆ ಹಾರ್ದಿಕ ಚಿಂತನೆ, ಚರ್ಚೆ, ಗ್ರಂಥಾಧ್ಯಯನ ಮೊದಲಾದ ಸಾಂಸ್ಕೃತಿಕ ಪರಿಸರದಲ್ಲಿ ವಾಸಿಸುವ ಕ್ರಮ ರೂಢಿಸಿಕೊಳ್ಳಬೇಕು. ಜೂಜಾಟ, ಧೂಮಪಾನ, ಮದ್ಯಪಾನ ಮೊದಲಾದ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳ ಬೇಕೆಂದು ಜನರಿಗೆ ಮನವಿ ಮಾಡಿರುವ ಶರಣರು, ಬೈಕ್ ವ್ಹೀಲಿಂಗ್, ವಾಹನಗಳ ಅತೀ ವೇಗದ ಚಾಲನೆಯಂತಹ ದುಸ್ಸಾಹಸ ಬೇಡವೆಂದೂ ಕಿವಿಮಾತು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts