More

    ಮೊದಲ ದಿನವೇ ಬಸ್‌ಗಳಲ್ಲಿ ಬೆಂಗಳೂರಿಗೆ ಸಿಂಹಪಾಲು

    ಚಿತ್ರದುರ್ಗ: ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ಮಂಗಳವಾರ ಆರಂಭವಾದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಹುತೇಕ ಬಸ್‌ಗಳು ಬೆಂಗಳೂರಿಗೆ ಧಾವಿಸಿದವು.

    ಬಸ್ ಸಂಚಾರದ ಸುದ್ದಿ ತಿಳಿದಿದ್ದ ಪ್ರಯಾಣಿಕರು ಮುಂಜಾನೆಯಿಂದಲೇ ನಿಲ್ದಾಣದೆಡೆ ಮುಖ ಮಾಡಿದ್ದರು. ಚಿತ್ರದುರ್ಗ ವಿಭಾಗೀಯ ನಿಯಂತ್ರಣ ಕಚೇರಿ ವ್ಯಾಪ್ತಿಯ ಡಿಪೋಗಳಿಂದ ಸಂಚರಿಸಿದ 60 ರಲ್ಲಿ 50 ಬಸ್‌ಗಳು ಬೆಂಗಳೂರಿಗೆ ತೆರಳಿವೆ.

    ಉಳಿದಂತೆ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ ಮೊದಲಾದೆಡೆ ಬಸ್‌ಗಳನ್ನು ಓಡಿಸಲಾಗಿದ್ದು, ಬುಧವಾರ ವಾಹನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಬಸ್ ಕಾಯ್ದಿರಿಸುವಿಕೆ ಸಂಖ್ಯೆಯಲ್ಲೂ ಜಾಸ್ತಿ ಆಗಿದೆ. ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭಿಸುವ ವೇಳೆ ಕೈ ಗೊಂಡಿದ್ದ ಮುನ್ನೆಚ್ಚರಿಕೆಗಳನ್ನು ಮುಂದುವರಿಸಲಾಗಿತ್ತು. ಪ್ರಯಾಣಿಕರಿಗೆ ಥರ್ಮಲ್ ಸ್ಕಾೃನಿಂಗ್ ಮಾಡಲಾಗುತ್ತಿತ್ತು.

    ಮಧ್ಯಪ್ರದೇಶಕ್ಕೆ ಕಾರ್ಮಿಕರು: ಜಿಲ್ಲೆಯಲ್ಲಿ ಸಿಲುಕಿದ್ದ ಮಧ್ಯಪ್ರದೇಶ ಮೂಲದ 146 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಪ್ರತ್ಯೇಕ ಐದು ಬಸ್‌ಗಳಲ್ಲಿ ಬೆಂಗಳೂರಿಗೆ ಕಳಿಸಿತು. ಮುಂಜಾನೆ ಆರುಗಂಟೆಗೆ ಅವರು ಹೊರಡುವ ವೇಳೆ ನಿಲ್ದಾಣಕ್ಕೆ ಆಗಮಿಸಿದ ಎಸ್ಪಿ ಜಿ.ರಾಧಿಕಾ, ಬಸ್‌ಗಳನ್ನು ಪೊಲೀಸ್ ಕಾವಲಿನೊಂದಿಗೆ ಕಳಿಸಿಕೊಟ್ಟರು.

    ಚಿತ್ರದುರ್ಗದಿಂದ ತಾಲೂಕು ಕೇಂದ್ರಗಳಿಗೆ ಮಾತ್ರ ಬಸ್‌ಗಳನ್ನು ಓಡಿಸಲಾಗುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಇಳಿಯುವಂಥವರು ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಗ್ರಾಮೀಣ ಪ್ರದೇಶಗಳಿಗೆ ಸದ್ಯಕ್ಕೆ ಬಸ್ ಸಂಚಾರ ಇಲ್ಲವೆಂದು ನಿಗಮದ ಡಿವಿ ಜನಲ್ ಟ್ರಾಫಿಕ್ ಕಂಟ್ರೋಲರ್ ಚನ್ನಬಸಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts