More

    ದೇಶಭಕ್ತಿ ತೋರಿಕೆ ಆಗದಿರಲಿ

    ಚಿತ್ರದುರ್ಗ: ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರಭಕ್ತಿ ಮೂಡಿಸುವ ಹಬ್ಬಗಳಾಗಿದ್ದು, ತೋರಿಕೆ ಪ್ರದರ್ಶನ ಮಾಡದೇ ದೇಶದ ಪ್ರತಿ ನಾಗರಿಕರು ರಾಷ್ಟ್ರ ಭಕ್ತಿ ಬೆಳೆಸಿಕೊಳ್ಳಬೇಕು ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ಎಸ್‌ಜೆಎಂ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮೆಲ್ಲರಿಗೂ ಹೃದಯವಿದೆ. ಆದರೆ, ಸಮಾಜದಲ್ಲಿ ಸಂಕುಚಿತ, ವಿಶಾಲ ಹಾಗೂ ಉದಾರ ಹೃದಯಿಗಳನ್ನು ಕಾಣಬಹುದಾಗಿದೆ. ಅನ್ಯರ ಕಷ್ಟ-ನಷ್ಟವನ್ನರಿತು ನೆರವಾಗುವ ಹೃದಯದಲ್ಲಿ ಜೀವಕಾರುಣ್ಯ ಸರ್ವೇಸಾಮಾನ್ಯ. ಇತರರ ಕಷ್ಟಗಳಿಗಾಗಿ ಮರುಗುವವನು ಮತ್ತು ಸಹಕರಿಸುವವನು ನಿಜವಾದ ಮಾನವ ಎಂದರು.

    ಎಸ್‌ಜೆಎಂ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಸದಸ್ಯರಾದ ಗಾಯತ್ರಿ ಶಿವರಾಂ, ರುದ್ರಾಣಿ ಗಂಗಾಧರ್, ಎಲ್.ಬಿ.ರಾಜಶೇಖರ್ ಹಾಗೂ ಚಂದ್ರಕಾಂತ ಚಟ್ಟಪಲ್ಲಿ, ಶಾಲಾ-ಕಾಲೇಜುಗಳ ಮುಖ್ಯಸ್ಥರು ಇದ್ದರು.

    ಪಿಎಚ್‌ಡಿ ಪಡೆವರು, ಕ್ರೀಡೆ, ಸಾಂಸ್ಕೃತಿಕ ಸಾಧಕರು, ನಿವೃತ್ತ ನೌಕರರು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದವರನ್ನು ಸನ್ಮಾನಿಸಲಾಯಿತು.

    22 ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮವಾಗಿ ಪಥಸಂಚಲನ ನಡೆಸಿದ ಎಸ್.ಜೆ.ಎಂ.ಆಂಗ್ಲಮಾಧ್ಯಮ ಶಾಲೆ (ಪ್ರ), ಎಸ್‌ಜೆಎಂ ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ (ದ್ವಿ), ಬೃಹನ್ಮಠ ಪ್ರೌಢಶಾಲೆ (ತೃ). ಕಾಲೇಜು ವಿಭಾಗದಲ್ಲಿ ಎಸ್.ಜೆ.ಎಂ.ಫಾರ್ಮಸಿ ಕಾಲೇಜು (ಪ್ರ), ಎಸ್‌ಜೆಎಂ ದಂತ ಮಹಾವಿದ್ಯಾಲಯ(ದ್ವಿ) ಮತ್ತು ಎಸ್‌ಜೆಎಂ ಮಹಿಳಾ ಮಹಾವಿದ್ಯಾಲಯ ತಂಡ ತೃತೀಯ ಬಹುಮಾನ ಪಡೆದವು.

    ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಮ್ಯಾ, ಮನೋಜ್‌ಕುಮಾರ್, ಮುಸೇಬ್ ಸಿದ್ಧಿಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts